×
Ad

ಬಂಟ್ವಾಳ: ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಡಾರ - ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ

Update: 2017-02-07 23:17 IST

ಬಂಟ್ವಾಳ, ಫೆ. 7: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಡಾರ - ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾರವರ ನೇತೃತ್ವದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಚುಚ್ಚುಮದ್ದು ನೀಡಿದರು. ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

ಯುನೆಸೆಫ್ ಮೊನಿಟರಿ ವಿಭಾಗದ ಡಾ. ಸೂಫಿಯಾ, ಪಿಟಿಎ ಅಧ್ಯಕ್ಷ ಕೊಡಾಜೆ ಬಾಲಕೃಷ್ಣ ಆಳ್ವ, ಆರೋಗ್ಯ ಸಹಾಯಕ ಕಸ್ತೂರಿ, ಬಾಲ ವಿಕಾಸ ಪ್ರೌಢ ಶಾಲಾ ಮುಕ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿ, ಪ್ರಾಥಮಿಕ ಶಾಲೆಯ ಎಚ್‌ಎಂ ಗ್ರೇಸ್ ಪಿ. ಸಲ್ದಾನ, ಶಾಲಾ ಆಡಳಾಧಿಕಾರಿ ಸಿ.ಶ್ರೀಧರ್, ಲಸಿಕಾ ನೂಡಲ್ ಅಧಿಕಾರಿ ಶಿಕ್ಷಕ ದಿನಕರ್ ಪೂಜಾರಿ ಉಪಸ್ಥಿತರಿದ್ದರು. ಅಭಿಯಾನದಲ್ಲಿ ಸುಮಾರು 800 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News