×
Ad

ಟ್ರಂಪ್ ಕಾರಣದಿಂದ ಹಿರಿಯ ದಂಪತಿಗಳು ಬೇರೆ ಬೇರೆ

Update: 2017-02-08 18:03 IST

ವಾಶಿಂಗ್ಟನ್,ಫೆ. 8: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಜನರು ರಾಜಕೀಯವಾಗಿ ಹರಿಹಂಚಿಹೋಗುತ್ತಿದ್ದಾರೆ. ಪತಿಪತ್ನಿಯರ ಸಂಬಂಧಗಳಲ್ಲಿ ಕೂಡಾ ಬಿರುಕು ಕಾಣಿಸಿಕೊಳ್ಳುತ್ತಿದೆ.

ಒಂದು ವರದಿ ಪ್ರಕಾರ 22ವರ್ಷ ಹಳೆಯ ಮದುವೆ ಸಂಬಂಧವೊಂದು ಪತಿ ಟ್ರಂಪ್‌ಗೆ ಓಟು ಕೊಟ್ಟಿರುವುದಕ್ಕಾಗಿ ಮುರಿದು ಹೋಗಿದೆ. ಪತಿ ಟ್ರಂಪ್‌ರಿಗೆ ಓಟು ನೀಡಿದ್ದಕ್ಕಾಗಿ ಗೆಲ್ ಮೆಕಾರ್ಮಿಕ್ ಎನ್ನುವ ಮಹಿಳೆ ತನ್ನ ಪತಿಗೆ ವಿಚ್ಛೇದನ ನೀಡಿದ್ದಾರೆ.

ಮುರಿದುಕೊಂಡಿದ್ದಾರೆ.ಕ್ಯಾಲಿಫೋರ್ನಿಯದ ನಿವೃತ್ತ ಫ್ರಿಜನ್ ಗಾರ್ಡ್ ಆಗಿರುವ ಗೆಲ್ ಮೆಕಾರ್ಮಿಕ್ ತನ್ನನ್ನು ಸಮಾಜವಾದವನ್ನು ಬೆಂಬಲಿಸುವ ಡೆಮಕ್ರಾಟ್ ಎಂದು ನಂಬುತ್ತಾರೆ.

ಕಳೆದವರ್ಷ ತನ್ನ ಪತಿ ತನ್ನ ಗೆಳೆಯರೊಂದಿಗೆ ಲಂಚ್‌ನ ವೇಳೆ ಟ್ರಂಪ್‌ಗೆ ಓಟು ಮಾಡುವುದನ್ನು ಯೋಚಿಸುತ್ತಿದ್ದುದನ್ನು ಅವರು ಕೇಳಿಸಿಕೊಂಡಿದ್ದರು. ನಂತರ ತನ್ನ ಪತಿಯಿಂದ ಬಿಡುಗಡೆಹೊಂದು ಮನಸ್ಸಾಯಿತು. ಯಾಕೆಂದರೆ ಪತಿ ಟ್ರಂಪ್‌ಗೆ ಪತಿ ವೋಟು ನೀಡಿದ್ದು ತನಗೆ ನಡೆಸಿದ ವಂಚನೆಯೆಂದು ಅವರು ಭಾವಿಸುತ್ತಾರೆ. ಹೀಗಾಗಿ ಅವರು ತನ್ನ ಪತಿಗೆ ವಿಚ್ಛೇದನ ನೀಡಿದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News