ಫೆ.10: ರಾಷ್ಟ್ರೀಯ ಅಂತರ್ ಕಾಲೇಜು ಉತ್ಸವ

Update: 2017-02-08 12:42 GMT

ಮಂಗಳೂರು, ಫೆ.8: ನಗರದ ಸಂತ ಅಲೋಶಿಯಸ್ ಕಾಲೇಜಿನ ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗವು ವಿಷಯವಾರು ಸಂಘಟನಾ ಅಲ್ಕೆಮಿಯು ರಾಷ್ಟ್ರೀಯ ಅಂತರ್ ಕಾಲೇಜು ಉತ್ಸವ ‘ಅನಾಲಿಸ್ಟ್ 2017’ನ್ನು ಫೆ.10ರಂದು ಎರಿಕಿ ಮಥಾಯಿ ಸಭಾಂಗಣದಲ್ಲಿ ಏರ್ಪಡಿಸಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ನಿರ್ದೇಶಕ ರೆ.ಫಾ. ಡಾ. ಪ್ರವೀಣ್ ಮಾರ್ಟಿಸ್ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಲಿಕುಳ ನಿಸರ್ಗಧಾಮದ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ವಿ. ರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ನಿರ್ದೇಶಕ ರೆ.ಫಾ. ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಿಚರ್ಡ್ ಗೊನ್ಸಾಲ್ವಿಸ್, ಆಲ್ಕೆಮಿ ಸಂಘಟನೆಯ ಅಧ್ಯಕ್ಷೆ ಡಾ. ದಿವ್ಯಾ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ಜಾಸ್ಟಿನ್ ಡಿಕಾಸ್ಟ, ಉಪ ಸಂಯೋಜಕ ರೋಹನ್ ವೇದಮಣಿ ಉಪಸ್ಥಿತರಿರುವರು ಎಂದರು.

ಉತ್ಸವದಲ್ಲಿ ಐಸ್ ಬ್ರೇಕರ್, ಸೆಮಿನಾರ್, ಕ್ವಿಝ್, ಟ್ರಜರ್ ಹಂಟ್ ವೀಡಿಯೊ ಜಗ್ಲಿಂಗ್, ಟರ್ನ್ ಕೋಟ್, ಮೋಡೆಲ್ ಪ್ರದರ್ಶನ ಹಾಗೂ ಸ್ಟಾರ್ ಆಫ್ ಎನಾಲಿಸ್ಟ್ ಮುಂತಾದ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಿಚರ್ಡ್ ಗೊನ್ಸಾಲ್ವಿಸ್, ಆಲ್ಕೆಮಿ ಸಂಘಟನೆಯ ಅಧ್ಯಕ್ಷೆ ಡಾ. ದಿವ್ಯಾ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ಜಾಸ್ಟಿನ್ ಡಿಕಾಸ್ಟ, ಉಪ ಸಂಯೋಜಕ ರೋಹನ್ ವೇದಮಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News