ಟ್ಯಾಲೆಂಟ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
Update: 2017-02-08 18:49 IST
ಮಂಗಳೂರು: ಫೆ 8, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಜಿಲ್ಲೆಯ 42 ಪ್ರೌಢ ಶಾಲೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮತ್ತು ಜೀವನವನ್ನು ಎದುರಿಸುವುದು ಹೇಗೆ?” ಎಂಬ ವಿಷಯದಲ್ಲಿ ಉಚಿತ ತರಬೇತಿ ಕಾರ್ಯಕ್ರಮವು ಜನವರಿ ತಿಂಗಳಿನಾದ್ಯಂತ ನಡೆಯಿತು.
ಸಂಸ್ಥೆಯ ಮಾಸಿಕ ಕಾರ್ಯಕ್ರಮದಂತೆ ಜನವರಿ ತಿಂಗಳಲ್ಲಿ 32 ಸರಕಾರಿ, 7 ಅನುದಾನಿತ ಮತ್ತು 3 ಅನುದಾನ ರಹಿತ ಹೀಗೆ ಒಟ್ಟು 42 ಪ್ರೌಢ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನಡೆಸಲಾಯಿತು.
ಗ್ರಾಮಾಂತರ ಪ್ರದೇಶದ ಮತ್ತು ಕನ್ನಡ ಮಾಧ್ಯಮ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು.
ಈ ತರಬೇತಿ ಕಾರ್ಯಾಗಾರದಲ್ಲಿ ರಫೀಕ್ ಮಾಸ್ಟರ್, ಮುಮ್ತಾಝ್ ಪಕ್ಕಲಡ್ಕ ಹಾಗೂ ಡಿ ಅಬ್ದುಲ್ ಹಮೀದ್ ಕಣ್ಣೂರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.