ಮೀನುಗಾರಿಕೆ ದೋಣಿಗಳನ್ನು ನಿರ್ಮಿಸಲು 2ನೆ ಕಂತಿನ ಸಹಾಯಧನ
ಮಂಗಳೂರು, ಫೆ.8: ಕೇಂದ್ರ ಪುರಸ್ಕೃತ-ಸಮುದ್ರ ಮೀನುಗಾರಿಕೆ ಮೂಲಭೂತ ಸೌಕರ್ಯ ಮತ್ತು ಹಿಡುವಳಿ ನಂತರದ ಚಟುವಟಿಕೆಗಳ ಅಭಿವೃದ್ಧಿ ಯೋಜನೆಯಡಿ ಹೊಸ ವಿನ್ಯಾಸದ ಯಾಂತ್ರಿಕ ಮೀನುಗಾರಿಕೆ ದೋಣಿಗಳನ್ನು ನಿರ್ಮಿಸಲು ಸಹಾಯಧನ ನೀಡುವ ಯೋಜನೆಯಡಿಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಮೊದಲನೆ ಕಂತು ಸಹಾಯಧನ ಪಡೆದುಕೊಂಡ ಫಲಾನುಭವಿಗಳಿಗೆ 2ನೆ ಕಂತಿನ ಸಹಾಯಧನ ಬಿಡುಗಡೆಯಾಗಿದೆ.
ಸದ್ರಿ ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿದ್ದು, ಸಂಬಂಧಪಟ್ಟ ಫಲಾನುಭವಿಗಳು ಬ್ಯಾಂಕ್ ಖಾತೆಯ ವಿವರ, ಲೆಕ್ಕಪರಿಶೋಧಕರಿಂದ ಪಡೆದ ಇನ್ವೆಸ್ಟ್‌ಮೆಂಟ್ ಪ್ರಮಾಣಪತ್ರ ಹಾಗೂ ಆಧಾರ್‌ಕಾರ್ಡ್‌ನ ಪ್ರತಿಯೊಂದಿಗೆ ಫೆ. 15ರೊಳಗಾಗಿ ಮೀನುಗಾರಿಕೆ ಉಪನಿರ್ದೇಶಕರ ಕಚೇರಿ, ಬಂದರು ಮಂಗಳೂರು ಇಲ್ಲಿಗೆ ಸಲ್ಲಿಸತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಸಹಾಯಧನವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗುವುದು. ಇದಕ್ಕೆ ಫಲಾನುಭವಿಗಳೇ ನೇರವಾಗಿ ಹೊಣೆಗಾರರಾಗಿರುತ್ತಾರೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.