ಫೆ.12: ರಾಜ್ಯಮಟ್ಟದ ಪ್ರೊ ಕಬಡ್ಡಿ ಮಾದರಿಯ ‘ಇರಾ ಕಬಡ್ಡಿ’ ಪಂದ್ಯಾಟ
ಕೊಣಾಜೆ, ಫೆ..8: ಬಂಟ್ವಾಳ ತಾಲೂಕಿನ ಭಾರತ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಬೆಳ್ಳಿಪ್ಪಾಡಿಗುತ್ತು ದಿ. ಕೃಷ್ಣಪ್ರಸಾದ್ ರೈ ಬಾವಬೀಡು ಇವರ ಸ್ಮರಣಾರ್ಥ, ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರು ಸಂಸ್ಥೆ, ದ.ಕ. ಜಿಲ್ಲಾ ಅಮೆಚೂರು ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಸಂಪೂರ್ಣ ಪ್ರೊ ಕಬಡ್ಡಿ ಮಾದರಿಯ ರಾಜ್ಯಮಟ್ಟದ ಹಗಲು-ರಾತ್ರಿ ‘ಇರಾ ಕಬಡ್ಡಿ-2017’ ಫೆ..12ರಂದು ಬೆಳಗ್ಗೆ 10ರಿಂದ ಇರಾ ಬಾವಬೀಡು ಗದ್ದೆಯಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ 55,000 ರೂ ಮತ್ತು ಲಕ, ದ್ವಿತೀಯ 44,000 ರೂ ಮತ್ತು ಲಕ, ತೃತೀಯ 22,000 ಮತ್ತು ಲಕ, ಚತುರ್ಥ 22,000 ಮತ್ತು ಲಕ ನೀಡಿ ಗೌರವಿಸಲಾಗುವುದು.
ಪಿಂಕ್ ಪ್ಯಾಂಥರ್ಸ್ ಜೈುರ್ ತಂಡದ ಜಗದೀಶ್ ಕುಂಬ್ಳೆ, ಯು ಮುಂಬೈ ತಂಡದ ಶಬೀರ್ ಬಾಪು, ದಬಾಂಗ್ ದಿಲ್ಲಿಯ ಪ್ರಶಾಂತ್ ರೈ, ತೆಲುಗು ಟೈಟಾನ್ಸ್‌ನ ಸುಕೇಶ್ ಹೆಗ್ಡೆ ಸೇರಿದಂತೆ ಸ್ಟಾರ್ ಕಬಡ್ಡಿ ಆಟಗಾರರು ಹಾಗೂ ಚಲನಚಿತ್ರ ನಟ-ನಿರ್ದೇಶಕರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಕೃಷ್ಣಪ್ಪ ಬಂಗೇರ ಪಾಣೆಮಂಗಳೂರು ಹಾಗೂ ಕಬಡ್ಡಿ ತರಬೇತುದಾರ ಕರುಣಾಕರ ಶೆಟ್ಟಿ ಮಡಂತ್ಯಾರ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು ಎಂದು ಭಾರತ್ಕ್ಲ ಫ್ರೆಂಡ್ಸ್ ಕ್ಲಬ್ ಪ್ರಕಟನೆ ತಿಳಿಸಿದೆ.