×
Ad

ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯ

Update: 2017-02-08 19:43 IST

ಉಡುಪಿ, ಫೆ.8: ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿದೆ. ಈವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಮತ್ತು ಮೀನುಗಾರಿಕೆ ಚಟುವಟಿಕೆಗಳಲ್ಲಿ ನಿರತರಾಗಿರುವವರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಫೆ.8ರಿಂದ 15ರ ವರೆಗೆ ಬೆಳಗ್ಗೆ 9:00ರಿಂದ ಸಂಜೆ 6:00 ಗಂಟೆಯವರೆಗೆ ಆಯೋಜಿಸಲಾಗಿದೆ.
ಇದು ಕೊನೆಯ ಅವಕಾಶವಾಗಿರುವುದರಿಂದ ಮತ್ತು ದೋಣಿಯಲ್ಲಿ ತೆರಳುವ ಕಾರ್ಮಿಕರಿಗೆ ಇದು ಕಡ್ಡಾಯವಾಗಿರುವುದರಿಂದ ಈ ಸೌಲ್ಯವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಮೀನುಗಾರರ ಸಂಘಟನೆಗಳು ತಮ್ಮ ಸದಸ್ಯರಿಗೆ ಬಯೋಮೆಟ್ರಿಕ್ ಕ್ಯಾಂಪ್ ಆಯೋಜಿಸಿರುವ ಬಗ್ಗೆ ತಿಳಿಸಿ ಹೇಳುಂತೆ ಸೂಚಿಸಲಾಗಿದೆ.

ಇದು ಕೊನೆಯ ಅವಕಾಶವಾಗಿರುವುದರಿಂದ ಮತ್ತು ದೋಣಿಯಲ್ಲಿ ತೆರಳುವ ಕಾರ್ಮಿಕರಿಗೆ ಇದು ಕಡ್ಡಾಯವಾಗಿರುವುದರಿಂದ ಈ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಮೀನುಗಾರರ ಸಂಘಟನೆಗಳು ತಮ್ಮ ಸದಸ್ಯರಿಗೆ ಬಯೋಮೆಟ್ರಿಕ್ ಕ್ಯಾಂಪ್ ಆಯೋಜಿಸಿರುವ ಬಗ್ಗೆ ತಿಳಿಸಿ ಹೇಳುವಂತೆ ಸೂಚಿಸಲಾಗಿದೆ. ಬಯೋಮೆಟ್ರಿಕ್ ಕ್ಯಾಂಪ್‌ನ್ನು ಮಂಗಳೂರು ಮೀನುಗಾರಿಕೆ ಬಂದರಿನ ಮಾಹಿತಿ ಕೇಂದ್ರ, ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಬಂದರು ಯೋಜನೆ ಕಚೇರಿ ಇಲ್ಲಿ ಆಯೋಜಿ ಸಲಾಗಿೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News