ನೆಲ್ಲಿಕುನ್ನು ತಂಙಳ್ ಉಪ್ಪಾಪ್ಪ ಉರೂಸ್ ಆರಂಭ
ಕಾಸರಗೋಡು, ಫೆ.8: ಮತಸೌಹಾರ್ದ ಸಂದೇಶ ಸಾರುವ ತಂಙಳ್ ಉಪ್ಪಾಪ ಊರೂಸ್ ನೆಲ್ಲಿಕುಂಜೆ ಮುಹೀಯುದ್ದೀನ್ ಜುಮಾಅತ್ ಮಸೀದಿಯಲ್ಲಿ ಆರಂಭಗೊಂಡಿದ್ದು, ಫೆ.19ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಖ್ಯಾತ ಧಾರ್ಮಿಕ ಮುಖಂಡರು ಉಪನ್ಯಾಸಗಳನ್ನು ನೀಡುವರು. ಬುಧವಾರದಂದು ಊರೂಸ್ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ.ಕುಂಞಾಮು ತೈವಳಪ್ಪು ಧ್ವಜಾರೋಹಣಗೈಯುವ ಮೂಲಕ ಉರೂಸ್‌ಗೆ ಚಾಲನೆ ನೀಡಿದರು.
ಕಡಪ್ಪುರ ಶ್ರೀ ಕೂರುಂಬ ಭಗವತೀ ಕ್ಷೇತ್ರ ಕಾರ್ಯದರ್ಶಿ ಕೆ. ವಿಜೇಶ್, ಉಪಾಧ್ಯಕ್ಷ ಕೆ. ರಾಘನ್, ನ್ಯಾಯವಾದಿ ಸಿ. ಎಚ್. ಕುಞಂಬು, ಎ. ಅಬ್ದುಲ್ ರಹ್ಮಾನ್, ಕೆ. ಟಿ. ಜಯರಾಮ್, ರಾಶಿದ್, ಸುರೇಂದ್ರನ್ ಕಾರವನ್, ಜಿ. ನಾರಾಯಣನ್, ಅಬ್ದುಲ್ ಕರೀಂ, ಹಾರಿಸ್, ಕೆ. ಬಿ. ಮುಹಮ್ಮದ್ ಕುಞಿ, ಎ. ಕೆ. ಮೊಯ್ದೀನ್ ಕುಞಿ, ಕೆ. ಎಸ್. ಮುಹಮ್ಮದ್ ಕುಞಿ ಹಾಜಿ, ಮೊಯ್ದೀನ್ ಕೊಲ್ಲಂಪಾಡಿ, ಟಿ. ಎ. ಶಾಫಿ, ಸಿ. ಎಂ. ಅಬ್ದುಲ್ ಹಾಜಿ, ಮಾಸ್ತಿಕುಂಡು ಅಬ್ದುಲ್ ರಹ್ಮಾನ್ ಹಾಜಿ, ಪಿ. ಬಿ. ಅಹ್ಮದ್, ಲತೀಫ್ ಕುಞಪ್ಪ, ಕೆ. ಎಂ. ಅಬ್ದುಲ್ ಹಮೀದ್ ಹಾಜಿ, ಕೆ. ಎಸ್. ಹಾರಿಸ್ ತಾಯಲಂಗಾಡಿ, ಎಂ. ಎ. ಮುಹಮ್ಮದ್ ಕುಞಿ ಪಳ್ಳಂ, ಮುಹಮ್ಮದ್ ಕುಞಿ ತಾಯಲಂಗಾಡಿ, ಮುನೀರ್, ಕೆ. ಎಂ. ಬಶೀರ್, ಅಬ್ದುಲ್ ರಹ್ಮಾನ್ ಕುಞಿ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಸಂಯುಕ್ತ ಜುಮಾಅತ್ ಖಾಜಿ ಪ್ರೊ. ಕೆ.ಆಲಿಕುಟ್ಟಿ ಮುಸ್ಲಿಯಾರ್ ಸರಣಿ ಧಾರ್ಮಿಕ ಉಪನ್ಯಾಸಕ್ಕೆ ಚಾಲನೆ ನೀಡಿದರು ಮುಹಯೀದ್ದಿನ್ ಜುಮಾಅತ್ ಮಸೀದಿ ಸಮಿತಿ ಅಧ್ಯಕ್ಷ ಹಾಜಿ ಪೂನ ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ದಿನಗಳಲ್ಲಿ ಅಬೀದ್ ಹುದವಿ ತಚ್ಚಣ್ಣ, ಮಾಹಿನ್ ಮನ್ನಾನಿ, ಪೇರೋಡ್ ಅಬ್ದುಲ್ ರಹಿಮಾನ್ ಸಖಾಪಿ, ಸಿಂಸಾರೂಲ್ ಹಖ್ ಹುದವಿ, ಅಲ್ ಹಾಫಿಳ್ ಇ.ಪಿ.ಅಬೂಬಕ್ಕರ್ ಅಲ್ ಖಾಸಿಮಿ, ಅನ್ವರ್ ಮೊಯ್ದೀನ್ ಹುದವಿ, ಅಡವಾಡ್ ಅಹಮ್ಮದ್ ಕಬೀರ್ ಬಾಖವಿ, ವಹಾಬ್, ಅಬ್ದುಲ್ ಸಮದ್ ಪುಕೊಟ್ಟೂರ್, ಅಬ್ದುಲ್ ಮಜೀದ್ ಬಾಖವಿ, ಸಲಾಹುದ್ದೀನ್ ಸಖಾಫಿ ಮಾಡನ್ನೂರ್, ಜಿ.ಎಸ್.ಅಬ್ದುಲ್ ರಹಮಾನ್ ಮದನಿ ಮೊದಲಾದವರು ಧಾರ್ಮಿಕ ಉಪನ್ಯಾಸ ನೀಡುವರು.
ಉರೂಸ್‌ನಲ್ಲಿ ಮಲಬಾರು ಜಿಲ್ಲೆಗಳಿಂದಲೂ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಭಾಗವಹಿಸುತ್ತಿದ್ದಾರೆ. ಕೇರಳ ಮತ್ತು ಕರ್ನಾಟಕ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮುಖಂಡರು, ಅಧಿಕಾರಿಗಳು ಭಾಗವಹಿಸುವರು. ಕೇರಳ ಹಾಗೂ ಕರ್ನಾಟಕದ ಸಚಿವರು ಭಾಗವಹಿಸುವರು.
ಫೆ.11ರಂದು ರಾತ್ರಿ 9ರಿಂದ ಮೂರು ದಶಕಗಳಿಂದ ಮುಹಯಿದ್ದೀನ್ ಜುಮಾಅತ್ ಮಸೀದಿಯ ಸಮಿತಿ ಅಧ್ಯಕ್ಷರಾಗಿ ಮುಂದುವರಿಯುತ್ತಿರುವ ಹಾಜಿ ಪೂನ ಅಬ್ದುಲ್ ರಹಿಮಾನ್ ಹಾಗೂ ಖತೀಬ್ ಆಗಿ ಸೇವೆಗೈಯುತ್ತಿರುವ ಜಿ.ಎಸ್.ಅಬ್ದುಲ್ ರಹಿಮಾನ್ ಮದನಿಯವರನ್ನು ಪಾಣಕ್ಕಾಡ್ ಸಯ್ಯದ್ ಮುನ್ವರಲಿ ಶಿಹಾಬ್ ತಂಙಳ್ ಸನ್ಮಾನಿಸುವರು.