ವಲಸಿಗ ನಿಷೇಧ ಪಟ್ಟಿಗೆ ಸದ್ಯ ಹೊಸ ಸೇರ್ಪಡೆಯಿಲ್ಲ : ಶ್ವೇತಭವನ
ವಾಶಿಂಗ್ಟನ್, ಫೆ. 8: ಅಮೆರಿಕ ಪ್ರವೇಶ ನಿರಾಕರಿಸಲ್ಪಟ್ಟಿರುವ ಏಳು ಮುಸ್ಲಿಮ್ ಬಾಹುಳ್ಯದ ದೇಶಗಳ ಪಟ್ಟಿಗೆ ಹೊಸ ದೇಶಗಳನ್ನು ಸೇರ್ಪಡೆಗೊಳಿಸುವ ಉದ್ದೇಶ ಸದ್ಯಕ್ಕೆ ಟ್ರಂಪ್ ಆಡಳಿತಕ್ಕಿಲ್ಲ ಎಂದು ಶ್ವೇತಭವನ ಮಂಗಳವಾರ ಹೇಳಿದೆ.
‘‘ಈಗಿನ ಮಟ್ಟಿಗೆ, ಪಟ್ಟಿಗೆ ಹೊಸ ದೇಶಗಳನ್ನು ಸೇರ್ಪಡೆಗೊಳಿಸುವ ಉದ್ದೇಶವಿಲ್ಲ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯನ್ ಸ್ಪೈಸರ್ ಸುದ್ದಿಗಾರರಿಗೆ ತಿಳಿಸಿದರು.
ಟ್ರಂಪ್ ಆಡಳಿತವು ಇತರ ಎಲ್ಲ ದೇಶಗಳ ಬಗ್ಗೆ ಗಮನ ಹರಿಸಿದೆ ಎಂದು ಹೇಳಿರುವ ಅವರು, ಆ ದೇಶಗಳೊಂದಿಗೆ ಅಮೆರಿಕ ಹೊಂದಿರುವ ಸಂಬಂಧ ಮತ್ತು ವಲಸಿಗರನ್ನು ತಡೆಯಲು ಜಾರಿಯಲ್ಲಿರುವ ಕ್ರಮಗಳನ್ನು ಅದು ಪರಿಗಣಿಸಿದೆ ಎಂದರು.
‘‘ಹಾಗಾಗಿ, ಪರಿಶೀಲನಾ ಅವಧಿ ಮುಗಿಯುವವರೆಗೆ ಯಾವುದೂ ಅಂತಿಮವಲ್ಲ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸ್ಪೈಸರ್ ತಿಳಿಸಿದರು.
ಇರಾನ್, ಇರಾಕ್, ಯಮನ್, ಸುಡಾನ್, ಸಿರಿಯ, ಲಿಬಿಯ ಮತ್ತು ಸೊಮಾಲಿಯ ಒಳಗೊಂಡ ಏಳು ದೇಶಗಳ ನಿವಾಸಿಗಳಿಗೆ ಅಮೆರಿಕ ಪ್ರವೇಶವನ್ನು ಟ್ರಂಪ್ ಆಡಳಿತ ನಿಷೇಧಿಸಿದೆ.ಆದರೆ, ಸದ್ಯ ಈ ಆದೇಶಕ್ಕೆ ಫೆಡರಲ್ ನ್ಯಾಯಾಲಯವೊಂದು ತಡೆಯಾಜ್ಞೆ ನೀಡಿದೆ.
ಗ್ರೀನ್ ಕಾರ್ಡ್ ಸಂಖ್ಯೆಯನ್ನು ಅರ್ಧಕ್ಕಿಳಿಸುವ ಮಸೂದೆ ಮಂಡನೆ
ಅಮೆರಿಕಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ಅರ್ಧಕ್ಕೆ ಕಡಿತಗೊಳಿಸುವ ಉದ್ದೇಶದ ಮಸೂದೆಯೊಂದನ್ನು ಅಮೆರಿಕದ ಇಬ್ಬರು ಸೆನೆಟರ್‌ಗಳು ಮಂಡಿಸಿದ್ದಾರೆ.
ಈ ಮಸೂದೆ ಅಂಗೀಕಾರಗೊಂಡರೆ, ಅಮೆರಿಕದಲ್ಲಿ ಖಾಯಂ ವಾಸಕ್ಕೆ ಅವಕಾಶ ನೀಡುವ ಗ್ರೀನ್ ಕಾರ್ಡ್‌ಯುವವರಿಗೆ ಸಮಸ್ಯೆ ಎದುರಾಗಬಹುದು.
‘ರೇಸ್ ಕಾಯ್ದೆ’ ಎಂಬ ಮಸೂದೆಯನ್ನು ರಿಪಬ್ಲಿಕನ್ ಸೆನೆಟರ್ ಟಾಮ್ ಕಾಟನ್ ಮತ್ತು ಡೆಮಾಕ್ರಟಿಕ್ ಸೆನೆಟರ್ ಡೇವಿಡ್ ಪರ್ಡ್ಯೂ ಮಂಡಿಸಿದ್ದಾರೆ.
ಪ್ರತಿ ವರ್ಷ ಈಗ ನೀಡಲಾಗುತ್ತಿರುವ ಸುಮಾರು 10 ಲಕ್ಷ ಗ್ರೀನ್ ಕಾರ್ಡ್‌ಗಳನ್ನು 5 ಲಕ್ಷಕ್ಕೆ ಕಡಿತಗೊಳಿಸುವಂತೆ ಈ ಮಸೂದೆ ಕೋರುತ್ತದೆ.