ಜನತಾ ವಿದ್ಯಾಲಯದಲ್ಲಿ ಝೇಂಕಾರ ನೂಪುರೋತ್ಸವ
ಭಟ್ಕಳ: ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಪ್ರೌಢಶಾಲೆಯಲ್ಲಿ ಝೇಂಕಾರ ಮೆಲೋಡೀಸ್ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಇವರ ಆಶ್ರಯದಲ್ಲಿ ಸಂಗೀತ ಸಾಹಿತ್ಯವನ್ನೊಳಗೊಂಡನೂಪುರೋತ್ಸವ ಸಮಾರಂಭ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುನಿಲ್ ನಾಯ್ಕ, ಝೇಂಕಾರ ಸಂಸ್ಥೆಯು ಜಿಲ್ಲೆಯ ಕಲಾ ಕ್ಷೇತ್ರದ ಶ್ರೀಮಂತ ರಾಯಭಾರಿಯಾಗಿದೆ ಎಂದರು.
ಝೇಂಕಾರ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ವಾರ್ಷಿಕ ವರದಿಯನ್ನು ಮಂಡಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶಂಭು ಹೆಗಡೆ ಇವರನ್ನು ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದ್ಮನಾಭ ಪೈ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
ಜನತಾ ವಿದ್ಯಾಲಯ ಪ್ರಾಚಾರ್ಯ ಎ.ಬಿ.ರಾಮರಥ ಉಪಸ್ಥಿತರಿದ್ದರು. ಡಾ.ಆರ್.ವಿ.ಸರಾಫ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಧೂಷಿ ನಯನಾ ಪ್ರಸನ್ನ ವಂದನಾರ್ಪಣೆ ಗೈದರು. ಸಭಾ ಕಾರ್ಯಕ್ರಮದ ನಂತರ ನಡೆದ ಕರ್ನಾಟಕ ಸಂಗೀತ, ಭರತನಾಟ್ಯ, ಚಿತ್ರಕಲಾ ಪ್ರದರ್ಶನ, ಚಿಣ್ಣರ ಚಲನಚಿತ್ರ ರಸಮಂಜರಿ ಪ್ರೇಕ್ಷಕರ ಗಮನ ಸೆಳೆಯಿತು.