×
Ad

ಮೂಡುಬಿದಿರೆ ಪುರಸಭೆಯಲ್ಲಿ ಶುಲ್ಕ ಏರಿಕೆ: ಮುಖ್ಯಾಧಿಕಾರಿಗೆ ಪ್ರತಿಭಟನೆಯ ಬಿಸಿ

Update: 2017-02-08 20:07 IST

ಮೂಡುಬಿದಿರೆ:ಕಟ್ಟಡ ತೆರಿಗೆ ಮತ್ತು  ಕಸ ಸಂಗ್ರಹ ಶುಲ್ಕ ಏರಿಕೆ ಖಂಡಿಸಿ ಪುರಸಭೆಯ ಬಿಜೆಪಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಪುರಸಭೆಯ ಹಿರಿಯ ಬಿಜೆಪಿ ಸದಸ್ಯ ಬಾಹುಬಲಿ ಪ್ರಸಾದ್ ನೇತ್ರತ್ವದಲ್ಲಿ ಮುಖ್ಯಾಧಿಕಾರಿ ಕಛೇರಿಗೆ ತೆರಳಿ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು, ಯಾವ ಮಾನದಂಡದಲ್ಲಿ ಶುಲ್ಕವನ್ನು ಏರಿಸಿದ್ದೀರಿ? ಎಂದು ಪ್ರಶ್ನಿಸಿದರು.

ಪ್ರತಿಭಟನಾಕಾರರಿಗೆ ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕಾ, 2014ರಲ್ಲೆ ದರ ಪರಿಷ್ಕರಣೆಯಾಗಿದ್ದು ಅದು ಈ ವರ್ಷ ಅನುಷ್ಠಾಗೊಂಡಿರುವುದರಿಂದ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ನಾನು ಪರಿಶೀಲಿಸುತ್ತೇನೆ ಎಂದರು.

ಆದರೂ ಪಟ್ಟುಬಿಡದ ಸದಸ್ಯರು, ಈ ವರ್ಷ ಹಳೆಯ ದರವನ್ನೇ ಮತ್ತೆ ಮುಂದುವರಿಸಬೇಕು ಎಂದಾಗ, ಮುಖ್ಯಾಧಿಕಾರಿಯವರು ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ ಅವರ ಜೊತೆ ಮಾತುಕತೆ ನಡೆಸಿ, ಹಳೆಯ ದರವನ್ನೇ ಮತ್ತೆ ಮುಂದುವರಿಸುವ ಬಗ್ಗೆ ಭರವಸೆ ನೀಡಿದರು.

ಪುರಸಭಾ ಸದಸ್ಯರಾದ ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ದಿನೇಶ್ ಪೂಜಾರಿ, ನಾಗರಾಜ ಪೂಜಾರಿ, ಪುರಸಭೆ ಮಾಜಿ ಸದಸ್ಯ ರಾಜೇಶ್ ಮಲ್ಯಾ, ಮೂಡುಬಿದಿರೆ ಕೈಗಾರಿಕಾ ವಲಯದ ಅಧ್ಯಕ್ಷ ಸದಾಶಿವ, ಮಾಜಿ ಪುರಸಭೆ ಸದಸ್ಯ ಹರೀಶ್ ಎಂ.ಕೆ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News