×
Ad

ಬಂಟ್ವಾಳ: ವಿಶೇಷ ಉಪನ್ಯಾಸ ಕಾರ್ಯಕ್ರಮ

Update: 2017-02-08 20:25 IST

ಬಂಟ್ವಾಳ, ಫೆ. 8: ಅನುಗ್ರಹ ಮಹಿಳಾ ಕಾಲೇಜಿನ ಆಂತರಿಕ ಭದ್ರತಾ ಗುಣಮಟ್ಟ ಸಂಘ ಹಾಗೂ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿದಾಯತ್ ಮಿಸ್ಕೋ ಟೀಚರ್ಸ್‌ ಟ್ರೈನಿಂಗ್ ಸಂಸ್ಥೆಯ ಪ್ರಾಂಶುಪಾಲೆ ಶಹನಾರ್ ಅಹ್ಮದ್ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ, ಶಿಕ್ಷಕ-ರಕ್ಷಕ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರ್ರ, ಜ್ಯೋತಿರತ್ನ ರೆಜಿನಾಲ್ಡ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಝಕಾರಿಯಾ ಕಲ್ಲಡ್ಕ, ಕಾಲೇಜಿನ ಆಡಳಿತ ಮಂಡಳಿಯ ಲೆಕ್ಕ ಪರಿಶೋಧಕ ಅಬ್ದುಲ್ ಹಮೀದ್ ಬಂಟ್ವಾಳ, ಸದಸ್ಯ ಹೆದರ್ ಆಲಿ ನೀರ್ಕಜೆ ಉಪಸ್ಥಿತರಿದ್ದರು.

    ಉಪನ್ಯಾಸಕಿ ರಮ್ಯಶ್ರೀ ಬಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಫೌಝಿಯಾ ಕಿರಾತ್ ಪಠಿಸಿದರು. ರೈಹಾನ ಸ್ವಾಗತಿಸಿದರು. ಜಮೀಲಾ ಫರ್ಹತ್ ವಂದಿಸಿದರು. ಆಯಿಷ ರುಬೈನಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News