×
Ad

12ರಂದು ‘ಗ್ರ್ಯಾಂಡ್ ಕೊಂಕಣ್ ಶವರ್ಸ್’ ವಿಲ್ಫಿ ನೈಟ್

Update: 2017-02-08 20:35 IST

ಉಡುಪಿ, ಫೆ.8: ದುಬೈಯ ಸೈಂಟ್ ಮೇರಿಸ್ ಕೊಂಕಣ್ ಕಮ್ಯುನಿಟಿಯ ವತಿಯಿಂದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಸಹಯೋಗದೊಂದಿಗೆ ‘ಗ್ರ್ಯಾಂಡ್ ಕೊಂಕಣ್ ಶವರ್ಸ್-2017’ 268ನೆ ವಿಲ್ಫಿ ನೈಟ್ ಕಾರ್ಯಕ್ರಮ ವನ್ನು ಫೆ.12ರಂದು ಸಂಜೆ 5:30ಕ್ಕೆ ಉದ್ಯಾವರ ಮೇಲ್‌ಪೇಟೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಆಯೋಜಿಸ ಲಾಗಿದೆ.

ಉಡುಪಿ ಧರ್ಮಪ್ರಾಂತದ ಯೋಜನೆಗಳಾದ ಆಧ್ಯಾತ್ಮಿಕ ತರಬೇತಿ ಕೇಂದ್ರ, ಕಿರು ಗುರು ತರಬೇತಿ ಸಂಸ್ಥೆ, ನಿವೃತ್ತ ಗುರುಗಳ ನಿವಾಸ ಹಾಗೂ ಬಿಷಪರ ನಿವಾಸ ಸ್ಥಾಪನೆಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಎಸ್‌ಎಂಕೆಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಯೋಜಕ ಫಾ.ವಲೇರಿ ಯನ್ ಮೆಂಡೋನ್ಸ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ವಿಲ್ಫಿ ನೈಟ್ ಕಾರ್ಯಕ್ರಮದಲ್ಲಿ ದಿವಂಗತ ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್‌ರವರ ಅಮರ ಹಾಡುಗಳನ್ನು ಅವರ ಧರ್ಮಪತ್ನಿ ಕೊಂಕಣ್ ಮೈನಾ ಮೀನಾ ರೆಬಿಂಬಸ್, ಪುತ್ರಿ ವೀಣಾ, ಪುತ್ರ ವಿಶ್ವಾಸ್, ಮೊಮ್ಮಗ ರೋಜರ್ ಹಾಗೂ ಪ್ರಸಿದ್ಧ ಗಾಯಕರಾದ ಪ್ರೇಮ್, ಐವನ್, ಬಬಿತಾ ಡೆಸಾ, ಕ್ಲೋಡ್, ಬಬಿತಾ ಪಿಂಟೊ, ಮುನಿಟಾ, ಅಶ್ವಿನ್, ನಿಹಾಲ್ ಹಾಗೂ ಫಾ.ಡೆನಿಸ್ ಡೆಸಾ ಹಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಓಶನ್ ಕಿಡ್ಸ್ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. ಸಂಗೀತ ತಜ್ಞ ಪಪ್ಪನ್ ಮತ್ತು ಜೋಸ್ವಿನ್ ಜೋಡಿಯು 14 ಮಂದಿಯ ಆರ್ಕೆಸ್ಟ್ರಾದೊಂದಿಗೆ ಗಾಯಕರಿಗೆ ಸಂಗೀತವನ್ನು ಒದಗಿಸಲಿದೆ. ಮಾತ್ರವಲ್ಲ, ಕಾಮೆಡಿ ಕಿಂಗ್ ಖ್ಯಾತಿಯ ಡೊಲ್ಲಾ ಮತ್ತು ಸಂಗಡಿಗರು ಮನೋರಂಜನೆ ಯನ್ನು ನೀಡಲಿರುವರು. ಉಚಿತ ಪ್ರವೇಶದ ಈ ಕಾರ್ಯ ಕ್ರಮದಲ್ಲಿ 5,000 ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೋ ಫೆರ್ನಾಂಡಿಸ್,ನೋಯೆಲ್ ಮಸ್ಕರೇನ್ಹಸ್, ಲೆನ್ಲಿ ರೆಗೊ, ವಲೇರಿಯನ್ ೆರ್ನಾಂಡಿಸ್, ಫಾ.ಡೆನಿಸ್ ಡೆಸಾ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News