×
Ad

12ರಿಂದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ

Update: 2017-02-08 20:41 IST

ಉಡುಪಿ, ಫೆ.8: ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ವತಿಯಿಂದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹವನ್ನು ಫೆ.12ರಿಂದ 18ರವರೆಗೆ ಹಮ್ಮಿಕೊಳ್ಳಲಾಗಿದೆ.

ಸಪ್ತಾಹದ ಪೂರ್ವಿಭಾವಿಯಾಗಿ ಫೆ.9ರಂದು ಸಂಜೆ 5ಗಂಟೆಗೆ ಮಲ್ಪೆ ಬೀಚ್‌ನಲ್ಲಿ ತ್ರಿವರ್ಣ ಆರ್ಟ್ಸ್ ಸೆಂಟರ್‌ನ ಕಲಾವಿದ ಹರೀಶ್ ಸಾಗಾ ಅವರಿಂದ ಮದ್ಯವ್ಯಸನಿಗಳ ಮಕ್ಕಳ ಕುರಿತು ‘ಮರಳು ಶಿಲ್ಪ’ ರಚನೆ ಕಾರ್ಯಕ್ರಮ ಜರಗಲಿದೆ. ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಫೆ.12 ರಂದು ಬೆಳಗ್ಗೆ 11:30ಕ್ಕೆ ಉಡುಪಿ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಜನರಲ್ ಮೇನೆಜರ್ ಜಯಕರ ಶೆಟ್ಟಿ ಇಂದ್ರಾಳಿ, ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ, ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಭಾಗವ ಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News