×
Ad

ಹೆಜಮಾಡಿ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

Update: 2017-02-08 20:52 IST

ಪಡುಬಿದ್ರಿ, ಫೆ.8: ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಗುರುವಾರ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹಿಸಲಾಗುತ್ತದೆ ಎಂಬ ಮಾಹಿತಿ ಮೇರೆಗೆ ಟೋಲ್ ವಿರೋಧಿ ಹೋರಾಟಗಾರರು ಬುಧವಾರ ಮಧ್ಯಾಹ್ನ ಹೆಜಮಾಡಿ ಟೋಲ್ ಪರಿಸರದಲ್ಲಿ ನಡೆಸಿದ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಸ್ಥಳೀಯರ ಬೇಡಿಕೆಗಳನ್ನು ಈಡೇರಿಸದೆ ಮತ್ತು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೂ ಜಿಲ್ಲಾಧಿಕಾರಿಗಳ ಸೂಚನೆಯ ವಿರುದ್ಧ ನಡೆದು ಗುತ್ತಿಗೆದಾರರು ಬಲವಂತವಾಗಿ ಟೋಲ್ ಗೇಟ್ ಪ್ರಾರಂಭಿಸಿದರೆ ಹೋರಾಟಗಾರರ ಜತೆ ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸಿ ಜಿಲ್ಲಾ ಬಂದ್‌ಗೆ ಕರೆ ನೀಡಬೇಕಾಗಬಹುದು ಎಂದು ಎಚ್ಚರಿಸಿದರು.

ಮುಖ್ಯಮಂತ್ರಿಗೆ ಪತ್ರ: ಉಸ್ತುವಾರಿ ಸಚಿವರ ಸಮ್ಮುಖ ಸಭೆ ನಡೆದಿದ್ದು ರಸ್ತೆ ಕಾಮಗಾರಿಯ ಬಗೆಗೆ ವಿಸ್ತತ ವರದಿ ತಯಾರಿಸಿ ಜಂಟಿ ಸಭೆ ನಡೆಸಿದ ಬಳಿಕ ಮುಂದುವರಿಯಬೇಕೆಂಬ ನಿರ್ಣಯ ಮಾಡಲಾಗಿದೆ. ರಸ್ತೆ ಕಾಮಗಾರಿ ಪೂರ್ತಿಯಾಗಿಲ್ಲ ಎಂದು ಎಲ್ಲಾ ಅಧಿಕಾರಿಗಳು ಅಭಿಪ್ರಾಯ ನೀಡುತ್ತಾರೆ. ಕೆಎ20 ನೋಂದಾಯಿತ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು, ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು, ಅವಿಭಜಿತ ಜಿಲ್ಲೆಯಲ್ಲಿ ಕಾನೂನಿನ ಪರಿಮಿತಿಯೊಳಗೆ ಟೋಲ್ ಸಂಗ್ರಹಿಸಲು ಪರಾರಂಭಿಸಬೇಕು.

ಸ್ಥಳೀಯರನ್ನು ಕಡೆಗಣಿಸಿ ಟೋಲ್ ಸಂಗ್ರಹಿಸಿದರೆ ಸಾವಿರರು ಜನ ಸೇರಿಸಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರ ಬಳಿ ಲಿಖಿತ ದೂರು ನೀಡಿ ಸಾಧ್ಯತೆಯಾದರೆ ವಿದಾನಸಭೆಯಲ್ಲಿಯೂ ಚರ್ಚಿಸುವುದಾಗಿ ಸೊರಕೆ ಹೇಳಿದರು.

 ಉಡುಪಿ ಜಿಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಕಾಪು ಪುರಸಭೆ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿವಾಕರ ಶೆಟ್ಟಿ, ತಾಪಂ ಸದಸ್ಯರುಗಳಾದ ದಿನೇಶ್ ಕೋಟ್ಯಾನ್ ಮತ್ತು ನೀತಾ ಗುರುರಾಜ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಮುಖಂಡರುಗಳಾದ ಕಿಶೋರ್ ಕುಮಾರ್ ಎರ್ಮಾಳ್,ಗಣೇಶ್ ಕೋಟ್ಯಾನ್, ಅಬ್ದುಲ್ ಹಮೀದ್ ಕನ್ನಂಗಾರು, ಸುಧೀರ್ ಕರ್ಕೇರ, ನವೀನ್ ಎನ್.ಶೆಟ್ಟಿ, ಕೇಶವ ಸಾಲ್ಯಾನ್, ರೇಣಕಾ ಪುತ್ರನ್, ಗುಲಾಮ್ ಮೊಹಮ್ಮದ್ ಉಪಸ್ಥಿತರಿದ್ದರು.


ನಾಳೆ ಉಚ್ಚಿಲದಲ್ಲಿ ಪ್ರತಿಭಟನೆ :

ಬಡಾ ಗ್ರಾ.ಪಂ ವ್ಯಾಪ್ತಿಯ ಉಚ್ಚಿಲದ ಪೇಟೆ ಪರಿಸರದಲ್ಲಿ ಸರ್ವಿಸ್ ರಸ್ತೆ ಮತ್ತು ಕ್ರಾಸಿಂಗ್ ವ್ಯವಸ್ಥೆಗೆ ಸಂಬಂಧಿಸಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ, ಬುಧವಾರ ಬೆಳಿಗ್ಗೆ 9.30ಕ್ಕೆ ಬಡಾ ಗ್ರಾ.ಪಂ ಸದಸ್ಯರು ಮತ್ತು ಉಚ್ಚಿಲ ಗ್ರಮದ ಬಹುತೇಕ ಸಂಘ ಸಂಸ್ಥೆಗಳು ಹಾಗೂ ಉಚ್ಚಿಲ ಆಟೋ ರಿಕ್ಷಾ ಚಆಲಕ ಮಾಲಕರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News