×
Ad

ಸಮಾಜದ ಕೊಳಕು, ತ್ಯಾಜ್ಯ ಮೊದಲು ತೊಲಗಲಿ : ಮ್ಯಾಗ್ಸಸೆ ವಿಜೇತ ಬೆಝ್‌ವಾಡ ವಿಲ್ಸನ್

Update: 2017-02-08 20:53 IST

ಮಣಿಪಾಲ, ಫೆ.8: ಇತರರು ಸೃಷ್ಟಿಸಿದ ಕೊಳಕು, ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರನ್ನು ಸಮಾನವಾಗಿ ಕಾಣುವ ಪ್ರವೃತ್ತಿ ಸಮಾಜದಲ್ಲಿ ಬೆಳೆಯುವವರೆಗೆ ಸ್ವಚ್ಛ ಭಾರತ್‌ಗೆ ಯಾವುದೇ ಅರ್ಥವಿಲ್ಲ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಂದೋಲನದ ಸಂಚಾಲಕ, ಪ್ರತಿಷ್ಠಿತ ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಕೋಲಾರದ ಬೆರ್ವಾಡ ವಿಲ್ಸನ್ ಅಭಿಪ್ರಾಯ ಪಟ್ಟಿದ್ದಾರೆ.

ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ (ಎಸ್‌ಒಸಿ) ಆಯೋಜಿಸಿದ ವಾರ್ಷಿಕ ಸಂವಹನ ಹಬ್ಬ ‘ಆರ್ಟಿಕಲ್ 19’ನ್ನು ಬುಧವಾರ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ತಾನು ಸಫಾಯಿ ಕರ್ಮಚಾರಿ ಕುಟುಂಬದಿಂದ ಬಂದವನು. ನನಗೆ ಆ ವೃತ್ತಿಯ ಕಷ್ಟ ಗೊತ್ತಿದೆ. ಪೌರಕಾರ್ಮಿಕ ವೃತ್ತಿಯಲ್ಲಿ ಇರುವವರು ಶೆೀ.93ರಷ್ಟು ಮಹಿಳೆಯರು ಎಂದರು.

 ಮನುಷ್ಯನ ಮನಸ್ಸಿನ ಸ್ವಚ್ಛತೆ ಮೊದಲಾಗಬೇಕು, ಆತನ ಅಹಂ ಮೊದಲು ತೊಲಗಬೇಕು. ಅನಂತರವಷ್ಟೇ ಸ್ವಚ್ಛ ಭಾರತ್ ಆಗಲಿ ಎಂದ ಅವರು, ಭಾರತೀಯರು ಹೇಗೆ ನಿಧಾನವಾಗಿ ಸಮಾಜದಲ್ಲಿ ಮಾನವೀಯತೆಯನ್ನು ನಾಶ ಡಿಸಿದರು ಎಂಬುದನ್ನು ವಿವರಿಸಿದರು.

ಯಾಂತ್ರೀಕೃತವಲ್ಲದ ಮಾನವ ತ್ಯಾಜ್ಯ ನಿರ್ವಹಣೆ (ಮ್ಯಾನುವಲ್ ಸ್ಕಾವೆಂಜರ್) ಇಂದಿಗೂ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಆಕ್ಷೇಪಿಸುವ ಮನಸ್ಸೂ ಇದೆ. ಹಣ ಕೊಡುವುದಿಲ್ಲವೆ ಎಂಬ ಪ್ರಶ್ನೆ ಎದುರಾಗುತ್ತದೆ. ದೇಶದ ಯಾವುದೇ ನಗರದಲ್ಲಿ ಪರಿಪೂರ್ಣ ಯಾಂತ್ರೀಕೃತ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲ ಎಂದು ಅವರು ಸ್ಪಷ್ಟವಾಗಿ ನುಡಿದರು.

ಒಟ್ಟಾಗಿರಲು ಸಾಧ್ಯವಿಲ್ಲ:ದೇಶದ ಯಾವುದೇ ಹಳ್ಳಿಯಲ್ಲಿ ಪ್ರಜಾಪ್ರಭುತ್ವ ಎಂಬುದಿಲ್ಲ. ಇಲ್ಲಿ ಅಸ್ಪಶೃತ್ಯೆ ಎಂಬುದು ಪರಂಪರಾಗತವಾಗಿ ಹರಿದು ಬರುತ್ತದೆ. ಇಲ್ಲಿ ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಕೆಲಸ ಮಾಡುತ್ತಿಲ್ಲ. ಸಂವಿಧಾನದ ಕಲಂ 19 ಮತ್ತು ಅಸ್ಪಶ್ಯತೆ ಎರಡೂ ಏಕಕಾಲದಲ್ಲಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, 35 ವರ್ಷ ಗಳ ಅನಂತರ ನನ್ನ ಪೂರ್ವಜರ ಸಂಪರ್ಕ ಹೊಂದದೆಯೂ ನನ್ನನ್ನು ಭಂಗಿ ಎಂದು ದಿಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಹೇಳುತ್ತಾರೆ. ಸಂವಿಧಾನದಿಂದ ನಾವು ಬದುಕುವುದೇ ವಿನಾ ಯಾವುದೇ ಇಸಂ, ಸಂಸ್ಕೃತಿಯಿಂದಲ್ಲ. ಮಾನವ ತ್ಯಾಜ್ಯ ನಿರ್ವಹಣೆ ನಮ್ಮಗಳ ಆ್ಕುಯಲ್ಲ ಎಂದು ಕಟುವಾಗಿ ನುಡಿದರು.

 ಕುಟುಂಬ ನಿರ್ವಹಣೆಯ ವಿಷಯ ಬಂದಾಗ, ವ್ಯವಸ್ಥೆ ನಮಗೆ ಈ ಕಸುಬನ್ನು ಅನಿವಾರ್ಯಗೊಳಿಸುತ್ತದೆ. ಇನ್ನೊಬ್ಬ ವ್ಯಕ್ತಿಯ ಮಲವನ್ನು ಸ್ವಚ್ಛಗೊಳಿಸುವುದನ್ನು ಯಾರೊಬ್ಬರೂ ಇಷ್ಟ ಪಡುವುದಿಲ್ಲ ಎಂಬುದನ್ನು ಸಮಾಜ ಅರಿತುಗೊಳಿಬೇಕು ಎಂದು ಒತ್ತಿ ಹೇಳಿದ ವಿಲ್ಸನ್, ಅಸ್ಪಶೃತ್ಯತೆಯ ಕರಾಳತೆಯನ್ನು ಅರಿತು ಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

 ಆಝಾದಿಗೆ ದೇಹದ್ರೋಹಿ: ಹಿಂದೆ ಪೌರಕಾರ್ಮಿಕ ಜನಾಂಗದವರು ಸತ್ತ ಪ್ರಾಣಿಯನ್ನು ಕೊಂಡೊಯ್ದು ತಿನ್ನುತ್ತಿದ್ದರು. ಊಟಕ್ಕೆ ಗತಿ ಇರಲಿಲ್ಲ. ಈಗ ಇಂತದೇ ಆಹಾರ ತಿನ್ನಬೇಕೆಂಬ ವಾದ ಹೇರಲಾಗುತ್ತಿದೆ.ನಾವು ಯಾವುದೇ ಆಹಾರ ತಿನ್ನಬಹುದು. ಇಂತಹುದೇ ಬಟ್ಟೆ ಧರಿಸಿ ಎಂದು ಹೇಳುವ ಅಧಿಕಾರವಿದೆಯೆ? ಪ್ರೇಮಿಗಳ ದಿನದಂದು ಗಂಡುಹೆಣ್ಣು ಪ್ರೀತಿಸಿದರೆ ಅದಕ್ಕೂ ಆಕ್ಷೇಪಿಸುತ್ತಾರೆ. ಪ್ರೀತಿಸಲು ಯಾರ ಅಪ್ಪಣೆ ಬೇಕು? ನಾವು ‘ಆಝಾಧಿ’ ಬಗ್ಗೆ ಮಾತನಾಡಿದರೆ ದೇಶದ್ರೋಹಿಗಳೆಂಬ ಪಟ್ಟ ಕಟ್ಟಲಾಗುತ್ತಿದೆ ಎಂದರು.

ಭಾರತದಲ್ಲಿ ಪುರುಷ ಪ್ರಧಾನ ಸಮಾಜವಿದೆ. ಹೆಣ್ಮಕ್ಕಳು ಕೆಲಸಕ್ಕೆ ಹೋಗುವ ಪ್ರವೃತ್ತಿ ಬೆಳೆದ ನಂತರ ಪುರುಷರ ಅನುಕೂಲಕ್ಕಾಗಿ ಕುಕ್ಕರ್, ಮಿಕ್ಸಿಯಂತಹ ಯಂತ್ರಗಳು ಚಾಲ್ತಿಗೆ ಬಂದವು. ಹೀಗಾಗಿ ಅಡುಗೆ ಮನೆಯಲ್ಲಿಯೂ ಪ್ರಜಾಪ್ರಭುತ್ವವಿಲ್ಲ. ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುತ್ತದೆ, ಆ್ಯಸಿಡ್ ಚೆಲ್ಲುತ್ತಾರೆ. ಇದು ಮಾನವತೆ ಮೇಲೆ ಆಗುತ್ತಿರುವ ಅತ್ಯಾಚಾರ. ದೇವಸ್ಥಾನ, ಚರ್ಚ್‌ಗೆ ಮಹಿಳೆಯರಿಗೆ ಪ್ರವೇಶವಿಲ್ಲದ ಕ್ರೂರ ಇತಿಹಾಸ ಇಲ್ಲಿದೆ ಎಂದುಬೆಝ್‌ವಾಡ ವಿಲ್ಸನ್ ವಿವರಿಸಿದರು.

ವೇಮುಲಾ ಪ್ರಕರಣದ ಬಳಿಕ ಅವರ ಇನ್ನೊಬ್ಬ ಮಗನನ್ನು ಉನ್ನತ ಶಿಕ್ಷಣಕ್ಕೆ ಸೇರಿಸಲು ತಾಯಿ ರಾಧಿಕಾ ವೇಮುಲಾ ಹಿಂದೇಟು ಹಾಕುತ್ತಿದ್ದಾರೆ. ವಿವಿಯಲ್ಲಿ ಸತ್ತರೆ ಏನು ಮಾಡೋದು ಎಂದು ಅವರು ಪ್ರಶ್ನಿಸುತ್ತಾರೆ. ಬಿಹಾರದಲ್ಲಿ ಪೌರಕಾರ್ಮಿಕರ ಕಾಲನಿ ‘ಗಂಧಾ ಬಸ್ತಿ’ಯನ್ನು ಸಚಿವರೇ ಉದ್ಘಾಟಿಸುತ್ತಾರೆ. 1.74 ಲಕ್ಷ ಬೋಗಿಗಳಿರುವ ಭಾರತದಲ್ಲಿ ರೈಲ್ವೆ ಸಚಿವರು 500 ಬೋಗಿಗಳಲ್ಲಿ ಬಯೋ ಟಾಯ್ಲೆಟ್ ನಿರ್ಮಿಸುತ್ತೇವೆ ಎಂದಾಗ ಕೈಚಪ್ಪಾಳೆ ಸಿಗುತ್ತದೆ. ಬುಲೆಟ್ ರೈಲು, ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವ ಸರಕಾರಕ್ಕೆ ಪೌರಕಾರ್ಮಿಕರ ಅಭಿವೃದ್ಧಿಗೆ ಅನುದಾನ ಇರಿಸಲು ಆಗುತ್ತಿಲ್ಲ ಎಂು ವಿಲ್ಸನ್ ವಿಷಾಧ ವ್ಯಕ್ತಪಡಿಸಿದರು.

ಮಾನವ ತ್ಯಾಜ್ಯ ನಿರ್ವಾಹಕರು ಇಂದು ಅಪೌಷ್ಠಿಕತೆ ಹಾಗೂ ಸೋಂಕು ರೋಗಗಳಿಂದ ಸಾಯುತಿದ್ದಾರೆ. ಹೊಸ ಕಸಬರಿಕೆಯನ್ನು ಹಿಡಿದುಕೊಂಡು ಬೀದಿ ಗುಡಿಸುವ ಭಂಗಿಯಲ್ಲಿ ಕೆಮರಾಗಳಿಗೆ ಫೋಸು ಕೊಡುವುದರಿಂದ ಪೌರಕಾರ್ಮಿಕರ ನೋವು, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದವರು ಖಾರವಾಗಿ ನುಡಿದರು.

ಅಥಮಾಡಿಕೊಳ್ಳಿ: ಇಂದಿನ ಯುವಜನಾಂಗ ಪೌರಕಾರ್ಮಿಕರನ್ನು ಮಾನವರಾಗಿ ಅರ್ಥ ಮಾಡಿಕೊಂಡು, ಬಹಿರಂಗವಾಗಿ ಅವರ ಪರವಾಗಿ ನಿಲ್ಲುವುದರಿಂದ ಈ ಸಂಪ್ರದಾಯವನ್ನು ನಿರ್ಮೂಲನ ಮಾಡಲು ಸಾಧ್ಯವಾಗಬಹುದು. ಮಹಿಳಾ ಪೌರಕಾರ್ಮಿಕರ ಪುನವರ್ಸತಿಗೆಂದು ಕೆಲ ವರ್ಷಗಳ ಹಿಂದೆ 560 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಕಳೆದ ವರ್ಷ ಈ ಮೊತ್ತವನ್ನು 10 ಕೋಟಿ ರೂ.ಗೆ ಇಳಿಸಲಾಯಿತು. ಈ ವರ್ಷ ಈ ಮೊತ್ತವನ್ನು ಕೇವಲ 5 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ ಎಂದವರು ಬಹಿರಂಗ ಪಡಿಸಿದರು.

ಎಸ್‌ಒಸಿ ನಿರ್ದೇಶಕಿ ಡಾ. ನಂದಿನಿ ಲಕ್ಷ್ಮೀಕಾಂತ್ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಕಾರ್ತಿಕ್ ರಾಜಗೋಪಾಲ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಮಾಳವಿಕಾ ಮೆನನ್ ವಂದಿಸಿದರು. ಹಿರಿಯಡಕ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿ ಶೆಟ್ಟಿ, ಬೋಧಕ ಸಂಚಾಲಕಿ ಶ್ರುತಿ ಶೆಟ್ಟಿ ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News