ಪುತ್ತೂರು: ಬೈಕ್‌ಗೆ ಬೆಂಕಿ ಹಚ್ಚಿದ ಆರೋಪಿಯ ಬಂಧನ
ಪುತ್ತೂರು, ಫೆ.8: ತಾಲೂಕಿನ ಪುಣ್ಚತ್ತಾರು ಎಂಬಲ್ಲಿ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಕಾಣಿಯೂರು ನಿವಾಸಿ ದಯಾನಂದ ಬೆಂಕಿ ಹಚ್ಚಿದ ಆರೋಪಿ. ಸ್ಥಳೀಯರಾದ ದಿನೇಶ ಎಂಬವರು ಪುಣ್ಚತ್ತಾರು ಪೇಟೆಯ ಬಳಿ ತನ್ನ ಬೈಕನ್ನು ನಿಲ್ಲಿಸಿದ್ದರು. ನಿಲ್ಲಿಸಿದ್ದ ಬೈಕ್‌ಗೆ ಯಾರೋ ಬೆಂಕಿ ಹಚ್ಚಿದ್ದರಿಂದ ಬೈಕ್ ಸುಟ್ಟು ಭಸ್ಮವಾಗಿತ್ತು. ಘಟನೆಯ ಕುರಿತು ದಿನೇಶ್ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸರು ಬೆಂಕಿ ಹಚ್ಚಿದ ಆರೋಪಿ ದಯಾನಂದ ಎಂಬಾತನನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು ಗಲಭೆ ನಡೆಸುವ ಉದ್ದೇಶದಿಂದ ಬೈಕ್‌ಗೆ ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಕಾಣಿಯೂರು ಸೂಕ್ಷ್ಮ ಪ್ರದೇಶವಾಗಿದ್ದು ಬೆಂಕಿ ಹಚ್ಚುವ ಮೂಲಕ ಗಲಭೆಗೆ ಪ್ರೇರಣೆ ನೀಡಿದ್ದರ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.