ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾ ಸಂಭ್ರಮದ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ
ಮಂಗಳೂರು, ಫೆ. 8: ನಗರದ ನೆಹರೂ ಮೈದಾನದಲ್ಲಿ ಫೆ.18ರಂದು ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕ ಮಹಾ ಸಂಭ್ರಮದ ಪ್ರಚಾರಾರ್ಥವಾಗಿ ಬುಧವಾರ ನಗರದ ಸ್ಟೇಟ್‌ಬ್ಯಾಂಕ್‌ನ ಪೊಯ್ನೀರ್ ಕಾಂಪ್ಲೆಕ್ಸ್‌ನಲ್ಲಿ ‘ಪತ್ರಿಕಾ ಧರ್ಮ’ ಮತ್ತು ‘ಶಿಕ್ಷಣ ಮತ್ತು ಭವಿಷ್ಯ’ ವಿಷಯಗಳ ಬಗ್ಗೆ ತರಗತಿ ನಡೆಯಿತು.
‘ವಾರ್ತಾಭಾರತಿ’ ಪತ್ರಿಕೆಯ ಹಿರಿಯ ವರದಿಗಾರ ಅಬ್ದುಲ್ ಶುಕೂರ್ ಮಲ್ಪೆ ಅವರು ‘ಪತ್ರಿಕಾ ಧರ್ಮ’ದ ಬಗ್ಗೆ ಹಾಗೂ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್ ಅವರು ‘ಶಿಕ್ಷಣ ಮತ್ತು ಭವಿಷ್ಯ’ ವಿಷಯದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಸಂದೇಶ ಪತ್ರಿಕೆಯ ಪ್ರಧಾನ ಸಂಪಾದಕ ಹಾಜಿ ಕೆ. ಎಸ್. ಹೈದರ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೌಷಾದ್ ಹಾಜಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಕೆ. ಎಲ್. ಉಮರ್ ದಾರಿಮಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಅಬ್ದುಲ್ಲ ಹಾಜಿ ಬೆಳ್ಮ, ನ್ಯಾಷನಲ್ ಟ್ಯುಟೇರಿಯಲ್ ಪ್ರಾಂಶುಪಾಲ ಖಾಲಿದ್ ಉಜಿರೆ, ಹರ್ಷಾದ್ ಕುಕ್ಕೆಪದವು, ಮುಜೀಬುರ್ರಹ್ಮಾನ್ ಇಜಾನಿ, ಕೆ. ಪಿ. ಯೂಸುಫ್ ಕಿನ್ಯ, ಖಾದರ್ ರಂತಡ್ಕ, ಇಲ್ಯಾಸ್ ಕೊಡಾಜೆ, ಅಬೂಬಕರ್ ಮೌಲವಿ ಬೋಳಂತೂರು, ಇಸ್ಮಾಯೀಲ್ ಬೆಂಗರೆ, ಉಮರ್ ಬೆಂಗರೆ, ಇಕ್ಬಾಲ್ ಬಾಳಿಲ, ಉನೈಸ್ ಪೆರಾಜೆ, ಹನೀಫ್ ಖಾನ್ ಪಾಜಪಳ್ಳ, ರಫೀಕ್ ಮೌಲವಿ, ಜಲೀಲ್ ಅಲ್‌ರಮಿ, ಮೊದು ಮೌಲವಿ ತೀರ್ಥಹಳ್ಳಿ, ಡಾಕ್ಟರ್ ರಿಝ್ವಿನ್, ನೌಫಲ್ ಕುಡ್ತಮೊಗರು, ಆದಂ ತಾಜ್ ಎಂ. ಎಂ. ಕುಂಞಿ ಮೊಂಟೆಪದವು, ಪಿ. ಟಿ. ಇಬ್ರಾಹೀಂ, ಪರ್ವೇಝ್ ಉಳ್ಳಾಲ, ಶಾಹುಲ್ ಹಮೀದ್ ಗುರುಪುರ, ಮುಹಮ್ಮದ್ ಅಲಿ ಪಾತೂರು, ಎ.ಕೆ.ವೌಲವಿ, ಬಶೀರ್ ಬಿ.ಎ., ಡಾ.ರಿಝ್ವಾನ್, ಝಾಕಿರ್ ಪೆರಾಜೆ, ಅನ್ಸಾಫ್ ಪುತ್ತೂರು, ರಶೀದ್ ಅಜ್ಜಾವರ ಮೊದಲಾದವರು ಉಪಸ್ಥಿತರಿದ್ದರು. ನೂರಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೊದಲಿಗೆ ಸಿದ್ಧೀಕ್ ಫೈಝಿ ಸ್ವಾಗತಿಸಿ, ಮುಸ್ತಫಾ ಫೈಝಿ ವಂದಿಸಿದರು.