ಸುರತ್ಕಲ್: ನಿವೇಶನರಹಿತರಿಂದ ಮನಪಾಕ್ಕೆ ಮುತ್ತಿಗೆ
Update: 2017-02-08 22:25 IST
ಮಂಗಳೂರು, ಫೆ. 8: ನಿವೇಶನರಹಿತರ ಹೋರಾಟ ಸಮಿತಿಯು ಪ್ರಮುಖ 7 ಬೇಡಿಕೆಗಳನ್ನು ಮುಂದಿಟ್ಟು ಕಳೆದ ಜನವರಿ 7ರಿಂದ ನಿರಂತರವಾಗಿ 3 ತಿಂಗಳ ಹೋರಾಟವನ್ನು ನಡೆಸಲು ನಿರ್ಧರಿಸಿದ್ದು, ಇದರ ಭಾಗವಾಗಿ ಫೆ. 13ರಂದು ಬೆಳಗ್ಗೆ 10:30ಕ್ಕೆ ಸುರತ್ಕಲ್ ಮಾರ್ಕೆಟ್‌ನಿಂದ ಮೆವಣಿಗೆ ಮೂಲಕ ಸುರತ್ಕಲ್ ಮನಪಾದ ಕಚೇರಿಗೆ ಮುತ್ತಿಗೆ ಹಾಕಲು ನಿರ್ದರಿಸಿದೆ. ಈ ಹೋರಾಟದಲ್ಲಿ ನಿಜವಾದ ನಿವೇಶನರಹಿತರು ಭಾಗವಸಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.