ಬೈಕ್-ಸ್ಕೂಟಿ ಢಿಕ್ಕಿ: ನಾಲ್ವರು ಗಂಭೀರ ಗಾಯ
Update: 2017-02-08 22:48 IST
ಹಿರಿಯಡ್ಕ, ಫೆ.8: ಆತ್ರಾಡಿ ಮಸೀದಿ ಕ್ರಾಸ್ ರಸ್ತೆಯ ಬಳಿ ಫೆ.7ರಂದು ರಾತ್ರಿ 10:50ರ ಸುಮಾರಿಗೆ ಪಲ್ಸರ್ ಬೈಕೊಂದು ಸ್ಕೂಟಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ಸ್ಕೂಟಿ ಸವಾರ ಬೆಳ್ಳಂಪಳ್ಳಿ ನಿವಾಸಿ ಮಧುಕರ್ ಕಾಂಚನ್(50), ಪಲ್ಸರ್ ಬೈಕ್ ಸವಾರ ಅದೇ ಗ್ರಾಮದವರಾದ ಶರತ್ ಕಾಂಚನ್, ಹಿಂಬದಿ ಸವಾರರಾದ ರಂಜನ್ ಕುಂದರ್, ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರೆಲ್ಲ ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಿಂದ ರಾತ್ರಿ ಪರೀಕ ಚಿಕಿತ್ಸಾ ಕೇಂದ್ರದ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಹೋಗುತ್ತಿದ್ದ ಮಧುಕರ್ ಅವರ ಸ್ಕೂಟಿಗೆ ಪರ್ಕಳ ಕಡೆಯಿಂದ ಆತ್ರಾಡಿ ಕಡೆಗೆ ಬರುತ್ತಿದ್ದ ಪಲ್ಸರ್ ಬೈಕ್ ಢಿಕ್ಕಿ ಹೊಡೆಯಿತು. ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.