ದೇರಳಕಟ್ಟೆ ರೇಂಜ್ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ-2017
ಮಂಗಳೂರು, ಫೆ. 8: ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ರೇಂಜ್ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ ಇತ್ತೀಚೆಗೆ ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದ್ರಸ ಹಾಗೂ ಮಲಾರ್ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಮೊಯ್ದಿನ್ ಕುಂಞಿ ಮರಾಠಿಮೊಲೆ ಧ್ವಜಾರೋಹಣಗೈದರು. ಮಲಾರ್ ಜುಮಾ ಮಸೀದಿ ಅಧ್ಯಕ್ಷ ಎಚ್.ಎಮ್.ಮುಹಮ್ಮದ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುರ್ರಝಾಕ್ ಅಝ್ಹರಿ ಪಾತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುಸ್ತಫಾ ಮಲಾರ್, ಮದ್ರಸದ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾಸ್ಟರ್, ಇಸ್ಮಾಯೀಲ್ ಮಲಾರ್ ಉಪಸ್ಥಿತರಿದ್ದರು.
ದೇರಳಕಟ್ಟೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಶ್ರಫ್ ರಹ್ಮಾನಿ ಚೌಕಿ ಉದ್ಘಾಟಿಸಿದರು. ವಿದ್ಯಾಭ್ಯಾಸ ಬೋರ್ಡ್‌ನ ತಪಾಸಣಾಧಿಕಾರಿ ಅಬ್ದುಲ್ಲ ಫೈಝಿ ಆದೂರ್ ದುಆ ನೆರವೇರಿಸಿದರು.
ಪನೀರು ಖತೀಬ್ ಯಾಸಿರ್ ಅರಾಫತ್ ಕೌಸರಿ ಮಾತನಾಡಿದರು. ರೇಂಜ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದೇರಳಕಟ್ಟೆ ಕೇಂದ್ರ ಮಸೀದಿ ಗೌರವಾಧ್ಯಕ್ಷ ಇಸ್ಮಾಯಿಲ್ ಹಾಜಿ, ಉಪಾಧ್ಯಕ್ಷ ಅಬ್ಬಾಸ್ ಹಾಜಿ, ಕಾರ್ಯದರ್ಶಿ ಅಬ್ದುಲ್ ಅಜೀಝ್ ಹಾಜಿ, ಕೋಶಾಧಿಕಾರಿ ಇಲ್ಯಾಸ್ ಹಾಜಿ, ಡಿ.ಹಂಝ, ಜಿ.ಹನೀಫ್, ರೇಂಜ್ ಮ್ಯಾನೇಜ್ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ, ಕೋಶಾಧಿಕಾರಿ ಅಬೂಸಾಲಿಹ್ ಹಾಜಿ ಕಿನ್ಯ, ಉಪಾಧ್ಯಕ್ಷ ಅಬ್ದುಲ್ಲ ರೆಂಜಾಡಿ, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ಅಬ್ದುಲ್ಲ ಫೈಝಿ ದೇರಳಕಟ್ಟೆ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ, ಎಸ್ಕೆಎಸೆಸೆಫ್ ಅಧ್ಯಕ್ಷ ನೌಫಲ್, ಕಾರ್ಯದರ್ಶಿ ಮುನ್ಶಿದ್, ಕ್ಲಸ್ಟರ್ ಅಧ್ಯಕ್ಷ ಸಯ್ಯಿದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧೆಯ ವಿಜೇತರು: ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಕಿನ್ಯ ಕುತುಬಿಯ್ಯಾ ಮದ್ರಸವು ಪ್ರಥಮ ಸ್ಥಾನ ಪಡೆಯಿತು. ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದ್ರಸ ದ್ವಿತೀಯ ಹಾಗೂ ವಿದ್ಯಾನಗರ ಫಲಾಹ್ ಮದ್ರಸ ತೃತೀಯ ಸ್ಥಾನ ಪಡೆದುಕೊಂಡಿದೆ.
ದೇರಳಕಟ್ಟೆ ರೇಂಜ್ ಪ್ರಧಾನ ಕಾರ್ಯದರ್ಶಿ ಫಾರೂಖ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು. ವೈಸ್. ಕನ್ವೀನರ್ ಇರ್ಫಾನ್ ಮೌಲವಿ ಕಲಾಯಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕರಾಯ ವಂದಿಸಿದರು.