ಕೆರೆಗೆ ಬಿದ್ದು ಬಾಲಕ ಮೃತ್ಯು
Update: 2017-02-08 22:50 IST
ಕುಂದಾಪುರ, ಫೆ.8: ಜಪ್ತಿ ಗ್ರಾಮದ ಕೆರೆಬೆಟ್ಟುವಿನ ಕೈಲ್ಕೇರೆ ಎಂಬಲ್ಲಿ ಬಾಲಕನೋರ್ವ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಫೆ.7ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕೆರೆಬೆಟ್ಟು ಮುತ್ತ ಮಡಿವಾಳ ಎಂಬವರ ಮೊಮ್ಮಗ ಪ್ರಜ್ವಲ್ (7) ಎಂದು ಗುರುತಿಲಾಗಿದೆ. ಈತ ಸಂಜೆ ಶಾಲೆಯಿಂದ ಮನೆಗೆ ಬಂದವನು ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಬಯಲಿನಲ್ಲಿ ಆಟ ಆಡಲು ಹೋಗಿದ್ದನು. ಅಲ್ಲಿಂದ ವಾಪಾಸು ಮನೆಗೆ ನಡೆದುಕೊಂಡು ಬರುವಾಗ ಸರಕಾರಿ ಜಾಗದಲ್ಲಿರುವ ಕೆರೆಯಲ್ಲಿ ಇರುವ ಬಾವಿಗೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.