ವಲಸೆ ಕಾರ್ಮಿಕ ಆತ್ಮಹತ್ಯೆ
Update: 2017-02-08 22:54 IST
ಉಡುಪಿ, ಫೆ.8: ಬೈಲೂರಿನ ರಂಗನಾಥ ಉಡುಪರ ಬಿಡಾರದಲ್ಲಿ ವಾಸ ಮಾಡಿಕೊಂಡಿದ್ದ ಕೊಡ್ಲಿಗಿ ನಿವಾಸಿ ಪರಶುರಾಮ(26) ಎಂಬವರು ಫೆ.7 ರಂದು ರಾತ್ರಿ 8:30ರ ಸುಮಾರಿಗೆ ಮಗುವನ್ನು ಎತ್ತಿಕೊಳ್ಳುವ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಡಿದ ಸಿಟ್ಟಿನಲ್ಲಿ ಕೋಣೆಯ ಮಾಡಿನ ಕಬ್ಬಿಣದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.