ಜ್ಯುವೆಲ್ಲರಿ ದರೋಡೆಗೆ ವಿಫಲ ಯತ್ನ
ಮಲ್ಪೆ, ಫೆ.8: ಚಿನ್ನಾಭರಣ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಮಹಿಳೆ ಯರು ಸೇರಿದಂತೆ ನಾಲ್ವರ ತಂಡ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಫೆ.7ರಂದು ಸಂಜೆ 7:30ರ ಸುಮಾರಿಗೆ ಕೆಮ್ಮಣ್ಣು ಕ್ರಾಸ್ ರಸ್ತೆಯಲ್ಲಿ ನಡೆದಿದೆ.
ಕಲ್ಯಾಣಪುರ ಸುಧೀಂದ್ರ ನಗರದ ಮಧುಕರ ನಾಯಕ್(48) ಎಂಬವರು ಕೆಮ್ಮಣ್ಣು ಕ್ರಾಸ್ ರಸ್ತೆಯಲ್ಲಿರುವ ತನ್ನ ಶ್ರೀಕಾಮಾಕ್ಷಿ ಜುವೆಲ್ಲರಿ ಅಂಗಡಿಯಲ್ಲಿ ವ್ಯವಹಾರವನ್ನು ಮುಗಿಸಿ ಹೊರಡುವ ವೇಳೆ ಇಬ್ಬರು ಅಪರಿಚಿತ ಮಹಿಳೆ ಯರು ಅಂಗಡಿಯ ಒಳಗೆ ಬಂದು ಚಿನ್ನದ ಮಾಂಗಲ್ಯ ಸರವನ್ನು ತೋರಿಸು ವಂತೆ ಕೇಳಿದರು. ಆಗ ಮಧುಕರ ನಾಯಕ್ ಈಗ ಅಂಗಡಿ ಬಂದ್ ಮಾಡುವ ಸಮಯ ಎಂದು ಹೇಳಿದರು. ಆಗ ಆ ಮಹಿಳೆಯರು ಅಲ್ಲಿಂದ ಹೊರಗೆ ಹೋದರು.
ಅಷ್ಟರಲ್ಲಿ ಇಬ್ಬರು ಅಪರಿಚಿತ ಗಂಡಸರು ಅಂಗಡಿಗೆ ಬಂದು, 1,500ರೂ. ಉಡುಗೊರೆ ಕೊಡಲು ಬೆಳ್ಳಿ ಸಾಮಾಗ್ರಿಗಳನ್ನು ತೋರಿಸಿ ಎಂದರು. ಮಧುಕರ್ ನಾಯಕ್ ಈಗ ವ್ಯಾಪಾರ ಇಲ್ಲ ಎಂದಾಗ ಅವರಲ್ಲಿ ಒಬ್ಬಾತ ಶೋಕೇಸ್ ಕೌಂಟರ್‌ಗೆ ಹಾರಿ ಮಧುಕರ ನಾಯಕ್‌ರ ಹತ್ತಿರ ಬಂದು ಒಮ್ಮೆಲೇ ಕರ ವಸ್ತ್ರದಿಂದ ಮುಖಕ್ಕೆ ಒತ್ತಿ ಹಿಡಿದನು. ಆತನಿಂದ ತಪ್ಪಿಸಿ ಕೊಂಡ ಮಧುಕರ ನಾಯಕ್ ಹೊರಗೆ ಬಂದು ಬೊಬ್ಬೆ ಹಾಕಿದರು. ಈ ವೇಳೆ ಆ ನಾಲ್ಲರು ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.