ಕಡಂದಲೆ: ಮೂಲಿಕ ವನ ಬೆಂಕಿಗಾಹುತಿ
ಮೂಡುಬಿದಿರೆ, ಫೆ.8: ಕಡಂದಲೆ ಗ್ರಾಮದ ಬಿಟಿ ರೋಡಿನಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು 10 ಎಕರೆ ಪ್ರದೇಶ ಬೆಂಕಿಗೆ ಆಹುತಿಯಾದ ಘಟನೆ ಬುಧವಾರ ನಡೆದಿದೆ. ಕಡಂದಲೆ ಬಿಟಿ ರೋಡಿನ ಪಕ್ಕದಲ್ಲಿರುವ ಗುಡ್ಡಕ್ಕೆ ಬೆಂಕಿ ಬಿದಿದ್ದು , ಸುಮಾರು 10 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, ಸ್ಥಳಿಯರು ಹಾಗು ಪಲ್ಕೆ ರಿಕ್ಷಾ ಚಾಲಕರು ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸ್ಥಳಕ್ಕಾಗಮಿಸಿದ ಮೂಡಬಿದ್ರೆ ಅಗ್ನಿಶಾಮಕದಳದವರಿಗೂ ಬೆಂಕಿ ನಂದಿಸುವುದಕ್ಕೆ ಹರಸಾಹಸ ಪಡಬೇಕಾಯಿತು.
ಮೂಲಿಕ ವನ ಬೆಂಕಿಗಾಹುತಿ:
ಕಡಂದಲೆ ಅರಣ್ಯ ಸಮಿತಿ ಹಾಗು ಮೂಡುಬಿದಿರೆ ಅರಣ್ಯ ಇಲಾಖೆ ಜಂಟಿಯಾಗಿ ಎರಡು ಎಕರೆ ಪ್ರದೇಶದಲ್ಲಿ ಮೂಲಿಕ ವನವೊಂದನ್ನು ನಿರ್ಮಿಸಿದ್ದು, ಇದರಲ್ಲಿ ಸುಮಾರು 145 ಪ್ರಭೇದದ 345 ಔಷಧ ಗಿಡಗಳನ್ನು ನೆಡಲಾಗಿತ್ತು. ಇದೀಗ ಮೂಲಿಕ ವನಕ್ಕೂ ಬೆಂಕಿ ಬಿದ್ದಿದ್ದು ಅಮೂಲ್ಯ ಸಸ್ಯಗಳು ಸುಟ್ಟು ಬೆಂಕಿಗೆ ಅಹುತಿಯಾಗಿವೆ.
ಮೂಡುಬಿದಿರೆ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶ್ವಸಿಯಾದರು. ಈ ಸಂದರ್ಭದಲ್ಲಿ ಮೂಡುಬಿದಿರೆ ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ,ಅರಣ್ಯ ರಕ್ಷಕ ಬಸಪ್ಪ ಹಲಗೇರಿ,ರಮೇಶ್ ನಾಯಕ್, ನಾರಾಯಣ,ಸುಧಾಕರ್ ಸದಾನಂದ ಶಿವನಂದ , ಹಾಗು ಮೂಡುಬಿದಿರೆ ಠಾಣೆಯ ಸಿಬ್ಬಂದಿ ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುಚರಿತ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.