ಮಾ.6: ದ.ಕ. ಜಿಲ್ಲಾ ಯೋಜನಾ ಸಮಿತಿಗೆ ಚುನಾವಣೆ
Update: 2017-02-08 23:39 IST
ಮಂಗಳೂರು, ಫೆ.8: ದ.ಕ. ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತ್ ಮತ ಕ್ಷೇತ್ರದಿಂದ 25 ಹಾಗೂ ನಗರ ಸ್ಥಳೀಯ ಮತ ಕ್ಷೇತ್ರದಿಂದ 14 ಸದಸ್ಯರನ್ನು ಆಯ್ಕೆ ಮಾಡಲು ಮಾ.6ರಂದು ಚುನಾವಣೆ ನಡೆಯಲಿದೆ.
ನಾಮಪತ್ರಗಳನ್ನು ಫೆ.17ರಿಂದ 23ರವರೆಗೆ ಜಿಪಂ ಸಿಇಒ ಕಚೇರಿಯಲ್ಲಿ ಸಲ್ಲಿಸಬಹುದು. ಫೆ.25ರಂದು ನಾಮ ಪತ್ರಗಳ ಪರಿಶೀಲನೆ, 28ರಂದು ಉಮೇದುವಾರಿಕೆ ಹಿಂದೆಗೆದುಕೊಳ್ಳುವಿಕೆ, ಮಾ.6ರಂದು ದ.ಕ. ಜಿಪಂ ಸಭಾಂಗಣದಲ್ಲಿ ಮತದಾನ ನಡೆಯಲಿದೆ. ಅಂದು ಸಂಜೆ 5ಕ್ಕೆೆ ಮತಗಳ ಎಣಿಕೆ ನಡೆಯಲಿದೆ.
ಮತದಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ಪ್ರಕಟಿಸಲಾಗಿದೆ.