×
Ad

ನೂತನ್ ಸಾಖರ್ ದಾಂಡೆಗೆ ಕವಿತಾ ಟ್ರಸ್ಟ್ ಪುರಸ್ಕಾರ ಪ್ರದಾನ

Update: 2017-02-08 23:47 IST

ಮಂಗಳೂರು, ಫೆ.8: ನಗರದ ಕೆ.ಎಸ್. ರಾವ್ ರಸ್ತೆಯ ಗ್ಯಾಲರಿ ಓರ್ಕಿಡ್‌ನಲ್ಲಿ ಜರಗಿದ ‘ಕವಿತಾ ಸಂಭ್ರಮ್’ ಕಾರ್ಯಕ್ರಮದಲ್ಲಿ ಕವಿತಾ ಟ್ರಸ್ಟ್ ಕೊಡಮಾಡುವ ‘ಮಥಾಯಸ್ ಕುಟುಂಬ ಕವಿತಾ ಪುರಸ್ಕಾರ’ವನ್ನು ಗೋವೆಯ ಕೊಂಕಣಿ ಕವಯಿತ್ರಿ ನೂತನ್ ಸಾಖರ್‌ದಾಂಡೆಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 25,000 ರೂ. ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್. ಲೋಬೊ, ಕೊಂಕಣಿಯ ಹಿರಿಯ ಕವಿ ಎಂ. ಪಿ. ರಾಡ್ರಿಗಸ್ ಅವರ ‘ರಸ್ತಯ ದೆಗೆಚಿಂ ುಲಾಂ’ (ರಸ್ತೆ ಬದಿಯ ಹೂವುಗಳು) ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೋರ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News