ಎಐಎಡಿಎಂಕೆ ಖಾತೆ ಸ್ಥಗಿತಗೊಳಿಸಲು ಒ.ಪನ್ನೀರ್ ಸೆಲ್ವಂ ಬ್ಯಾಂಕ್ ಗೆ ಪತ್ರ
Update: 2017-02-09 11:53 IST
ಚೆನ್ನೈ, ಫೆ.9: ಎಐಎಡಿಎಂಕೆ ಖಚಾಂಚಿ ಹುದ್ದೆಯಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ತಿರುಗೇಟು ನೀಡಿರುವ ಉಸ್ತುವಾರಿ ಮುಖ್ಯ ಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಎಐಎಡಿಎಂಕೆ ಪಕ್ಷದ ಖಾತೆಯನ್ನು ಸ್ಥಗಿಗೊಳಿಸುವಂತೆ ಮತ್ತು ತನ್ನ ಆದೇಶವಿಲ್ಲದೆ ಯಾವುದೇ ವ್ಯವಹಾರಕ್ಕೂ ಅವಕಾಶ ನೀಡದಂತೆ ಪಕ್ಷದ ಖಾತೆ ಹೊಂದಿರುವ ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ.
ಪನ್ನೀರ್ ಸೆಲ್ವಂ ಅವರು ತನ್ನನ್ನು ಖಜಾಂಚಿ ಹುದ್ದೆಯಿಂದ ತೆಗೆದು ಹಾಕಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೂಲಕ ಹೋರಾಟ ನಡೆಸಲು ಮುಂದಾಗಿದ್ದಾರೆ.