×
Ad

ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಣೆ: ಯು.ಡಿ.ವೈ.ಎಫ್ ಪ್ರತಿಭಟನೆ

Update: 2017-02-09 12:20 IST

ಮಂಜೇಶ್ವರ, ಫೆ.9: ಕಾಮಗಾರಿ ಪೂರ್ತಿಗೊಳಿಸದೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಟೋಲ್ ಸಂಗ್ರಹ ನಡೆಸುವುದನ್ನು ಪ್ರತಿಭಟಿಸಿ ಐಕ್ಯರಂಗದ ಯುವ ಸಂಘನಟೆಯಾದ ಯು.ಡಿ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಟೋಲ್ ಪ್ಲಾಝಾ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ನೂರಾರು ಯು.ಡಿ.ವೈ.ಎಫ್ ಕಾರ್ಯಕರ್ತರು ಪಾಳ್ಗೊಂಡಿದ್ದರು. ತಲಪಾಡಿ ಪೆಟ್ರೋಲ್ ಬಂಕ್ ಬಳಿಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಟೋಲ್ ಪ್ಲಾಝಾದ ಮುಂದೆ ಕರ್ನಾಟಕ ಪೋಲೀಸರು ತಡೆದರು.

ನಾಸಿರ್ ಮೊಗ್ರಾಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹ ಮಾಡಬಾರದು. ಸರ್ವೀಸ್ ರಸ್ತೆ , ಮೇಲ್ಸೇತುವೆಗಳು ಪೂರ್ಣಗೊಳಿಸಿದೆ ಸಂಗ್ರಹ ಮಾಡಕೂಡದು ಎಂದು ಹೇಳಿದರು.

ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ನಾಣಿಹಿತ್ಲು , ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಮುಖಂಡರುಗಳಾದ ಮುಕ್ತಾರ್ ಉದ್ಯಾವರ , ಇಕ್ಬಾಲ್ ಕೊಳಿಯೂರು , ಇರ್ಷಾದ್ ಮಂಜೇಶ್ವರ , ಯೂಸುಫ್ ಉಳುವಾರು , ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಝೀರ್ ಹಾಜಿ , ಗೋಲ್ಡನ್ ರಹಿಮಾನ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು. ಮುಸ್ಲಿಂ ಯೂತ್ ಲೀಗ್ ಮಂಡಲಾಧ್ಯಕ್ಷ ಸೈಫುಲ್ಲಾ ತಂಙಳ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News