ದೇಶದ ಕಾರಾಗೃಹಗಳಲ್ಲಿ 81,000ಕ್ಕೂ ಅಧಿಕ ಮುಸ್ಲಿಮ್ ಕೈದಿಗಳು
ಹೊಸದಿಲ್ಲಿ, ಫೆ.9: ದೇಶದಾದ್ಯಂತ ವಿವಿಧ ಕಾರಾಗೃಹಗಳಲ್ಲಿ 81,000ಕ್ಕೂ ಹೆಚ್ಚು ಮುಸ್ಲಿಮ್ ಕೈದಿಗಳಿದ್ದಾರೆಂಬ ಲೇಟೆಸ್ಟ್ ಅಂಕಿಸಂಖ್ಯೆಗಳ ಆಧಾರದ ಮಾಹಿತಿಯನ್ನು ಸರಕಾರ ಇಂದು ರಾಜ್ಯಸಭೆಗೆ ನೀಡಿದೆ.
‘‘ಕೋರ್ಟುಗಳಿಂದ ಅಪರಾಧಿಗಳೆಂದು ಘೋಷಿಸಲ್ಪಟ್ಟವರು ಹಾಗೂ ವಿಚಾರಣಾಧೀನ ಕೈದಿಗಳನ್ನು ಮಾತ್ರ ಜೈಲುಗಳಲ್ಲಿಡಲಾಗಿದೆ,’’ ಎಂದು ಭಾರತದ ವಿವಿಧ ಕಾರಾಗೃಹಗಳಲ್ಲಿ ಬಂಧಿಯಾಗಿರುವ ‘ನಿರಪರಾಧಿ’ ಮುಸ್ಲಿಮರ ಬಗ್ಗೆ ಮಾಹಿತಿ ಕೋರಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್ ಅವರು ಹೇಳಿದ್ದಾರೆ.
2015ರ ಅಂತ್ಯದ ತನಕ ದೇಶದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 8,306 ಮುಸ್ಲಿಂ ಕೈದಿಗಳಿದ್ದಾರೆಂದು ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಮಾಹಿತಿ ತಿಳಿಸುತ್ತದೆ, ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮುಸ್ಲಿಮರ ಮೇಲಾಗುತ್ತಿರುವ ಕಿರುಕುಳ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ಕಿರುಕುಳದ’ ಪ್ರಶ್ನೆಯೇ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.