×
Ad

ಈ ದೇಶದಲ್ಲಿ ಇನ್ನು ಕೌಟುಂಬಿಕ ಹಿಂಸೆ ಅಪರಾಧವಲ್ಲ !

Update: 2017-02-09 14:37 IST

ಮಾಸ್ಕೊ,ಫೆ. 9: ಗೃಹಹಿಂಸೆ ಅಪರಾಧವಲ್ಲ ಎನ್ನುವ ವಿವಾದಾತ್ಮಕ ಕಾನೂನಿಗೆ ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಂಗೀಕಾರದ ಮುದ್ರೆ ಒತ್ತಿದ್ದಾರೆ. ದೇಶವ್ಯಾಪ್ತಿ ತಪ್ಪು ಸಂದೇಶ ರವಾನೆಯಾಗಿರುವ ಈ ಕಾನೂನನ್ನು ವಿರೋಧಿಸಿ ದೇಶದ ವಿವಿಧ ಕಡೆಗಳಲ್ಲಿ ಟೀಕೆಗಳು ಕೇಳಿಬರುತ್ತಿದ್ದರೂ ಪುಟಿನ್ ಕಾನೂನಿಗೆ ಒಪ್ಪಿಗೆ ನೀಡಿದ್ದಾರೆ. ಈ ಮೊದಲು ಈ ಕಾನೂನು ಪಾರ್ಲಿಮೆಂಟ್‌ನ ಎರಡು ಸದನಗಳಲ್ಲಿ ಪಾಸಾಗಿತ್ತು. ರಷ್ಯದಲ್ಲಿ ಪ್ರತೀ 40 ನಿಮಿಷಕ್ಕೆ ಒಂದರಂತೆ ಗೃಹಹಿಂಸೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಾನೂನು ಅಪಾಯಕಾರಿಯಾಗಬಹುದೆಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

 ಸಂಗಾತಿಗಾಗಲಿ ಮಕ್ಕಳಿಗಾಗಲಿ ಗಂಭೀರ ಗಾಯಗಳಾಗದಂತೆ ಹೊಡೆಯುವುದು ರಷ್ಯದಲ್ಲಿ ಈವರೆಗೂ ಎರಡುವರ್ಷ ಶಿಕ್ಷೆ ಸಿಗುವ ಅಪರಾಧವಾಗಿತ್ತು. ಆದರೆ,ಹೊಸ ಕಾನೂನು ಪ್ರಕಾರ ಕೇವಲ ಹದಿನೈದು ದಿವಸ ಜೈಲುವಾಸ ಅಥವಾ ದಂಡ ವಿಧಿಸಲಾಗುತ್ತದೆ. ಈ ಕಾನೂನಿನಿಂದ ಗೃಹಹಿಂಸೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಮಾನವಹಕ್ಕು ಕಾರ್ಯಕರ್ತರು ವಾದಿಸಿದ್ದಾರೆ. ಆದರೆ ಇತರರಿಂದ ಆಕ್ರಮಣಕ್ಕೊಳಗಾದರೆ ಸಿಗುವುದಕ್ಕಿಂತ ಹೆಚ್ಚು ಕಠಿಣ ಶಿಕ್ಷೆಯನ್ನು ಗೃಹ ಹಿಂಸೆಗೆ ನೀಡಲಾಗುತ್ತಿದೆ. ಆದ್ದರಿಂದ ಹೊಸ ಕಾನೂನು ಇದನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಹೊಸ ಕಾನೂನನ್ನು ಬೆಂಬಲಿಸುವವರು ವಾದಿಸಿದ್ದಾರೆ. ಹೊಸ ಕಾನೂನಿನಿಂದ ರಷ್ಯದ ಪರಂಪರಾಗತ ಕುಟುಂಬ ಸಂಕಲ್ಪವನ್ನು ರಕ್ಷಿಸಲು ಸಾಧ್ಯವೆಂದು ಪರಂಪರಾಗತ ಕ್ರೈಸ್ತ ವಿಭಾಗ ಹೇಳಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News