ರಾಜ್ಯಪಾಲರ ಭೇಟಿ: ಸಂಜೆ 5 - ಸೆಲ್ವಂ, ರಾತ್ರಿ 7.30 -ಶಶಿಕಲಾ
Update: 2017-02-09 15:18 IST
ಚೆನ್ನೈ, ಫೆ.9: ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲ ಸಿ.ಎಚ್. ವಿದ್ಯಾಸಾಗರ್ ರಾವ್ ಚೆನ್ನೈಗೆ ಆಗಮಿಸಲಿದ್ದು, ಇಂದು ಸಂಜೆ ಅವರನ್ನು ಉಸ್ತುವಾರಿ ಮುಖ್ಯ ಮಂತ್ರಿ ಒ.ಪನ್ನೀರ್ ಸೆಲ್ವಂ ಭೇಟಿಯಾಗಲಿದ್ದಾರೆ.
ಮುಖ್ಯ ಮಂತ್ರಿ ಭೇಟಿಗೆ ವೇಳೆ ನಿಗದಿಯಾಗಿದ್ದು ಉಸ್ತುವಾರಿ ಮುಖ್ಯ ಮಂತ್ರಿ ಒ.ಪನ್ನೀರ್ ಸೆಲ್ವಂ ಸಂಜೆ 5:00ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ನಟರಾಜನ್ ಅವರು ರಾಜ್ಯಪಾಲರನ್ನು ರಾತ್ರಿ 7:30ಕ್ಕೆ ಭೇಟಿಯಾಗಿ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ.