×
Ad

ಮಂಗಳೂರು: ಕಸ್ಟಮ್ಸ್ ಡಿಆರ್ ಐ ಅಧಿಕಾರಿಗಳ ಕಾರ್ಯಾಚರಣೆ, ಚಿನ್ನದ ಪ್ಲೇಟ್ಸ್ ವಶ

Update: 2017-02-09 17:10 IST

ಮಂಗಳೂರು, ಫೆ. 9: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 20.24 ಲಕ್ಷ ರೂ. ವೆಚ್ಚದ 694.2 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಕಾಸರಗೋಡು ನಿವಾಸಿ ಹ್ಯಾರಿಸ್ ್ಚಜಹಮ್ಮದ್ ಕುಂಞಿ (42), ಮಂಜೇಶ್ವರ ನಿವಾಸಿ ಫೈಸಲ್ (42) ಎಂದು ಗುರುತಿಸಲಾಗಿದೆ.

ಮುಹಮ್ಮದ್ ಕುಂಞಿ ಬುಧವಾರ ಬೆಳಗ್ಗೆ ದುಬೈನಿಂದ ಜೆಟ್ ಏರ್‌ವೇಸ್‌ನಲ್ಲಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಕಂದಾಯ ಗುಪ್ತಚರ ಅಧಿಕಾರಿಗಳು ಆತನ ಕಾರನ್ನು ಹಿಂಬಾಲಿಸಿದರು. ಆರೋಪಿ ಮಂಗಳೂರಿಗೆ ಬರುತಿತಿದ್ದಂತೆ ಇನ್ನೊಬ್ಬ ಆರೋಪಿ ಆತನೊಂದಿಗೆ ಸೇರಿಕೊಂಡಿದ್ದು, ಕೂಡಲೆ ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂದರ್ಭ ಆರೋಪಿಗಳ ಬ್ಯಾಗ್ ಪರಿಶೀಲಿಸಿದಾಗ ಎಲೆಕ್ಟ್ರಾನಿಕ್ ಉಪಕರಣವೊಂದರಲ್ಲಿ ಚಿನ್ನದ ಪ್ಲೇಟ್‌ಗಳಿರುವುದು ಕಂಡುಬಂತು. ಅವುಗಳಿಗೆ ಪಾದರಸದ ಮೇಲ್ಪದರ ಹಾಕಿ ಗುರುತು ಹಿಡಿಯದಂತೆ ಮಾಡಿದ್ದರು.ಆರೋಪಿಗಳಿಬ್ಬರನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News