×
Ad

​ಕಾಂಕ್ರಿಟೀಕರಣ: ನಾಗೋರಿ ಅಡ್ಡ ರಸ್ತೆ ಉದ್ಘಾಟನೆ

Update: 2017-02-09 17:53 IST

ಮಂಗಳೂರು, ಫೆ.9: ಮನಪಾ ವ್ಯಾಪ್ತಿಯ ಕಾಂಕ್ರಿಟೀಕೃತ ನಾಗೋರಿ ಅಡ್ಡ ರಸ್ತೆಯನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸಾಧ್ಯವಾದಷ್ಟು ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಬೇಕು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ನಾಗೋರಿ ಅಡ್ದ ರಸ್ತೆಗೂ ಕಾಂಕ್ರಿಟೀಕರಣ ಮಾಡಲಾಗಿದೆ ಎಂದರು.

ಈ ಸಂದರ್ಭ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಹೇಮಂತ ಗರೋಡಿ, ಕೃತಿನ್ ಕುಮಾರ್, ಶ್ರೀಧರ್ ರಾಜ್ ಶೆಟ್ಟಿ, ಲ್ಯಾನ್ಸ್ ಮೊಂತೇರೊ, ಶಶಿಧರ್, ಉಮೇಶ್ ದೇವಾಡಿಗ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News