ಸಮಸ್ತ ಕಚೇರಿಗೆ ಮೈಕ್‌ಸೆಟ್ ಹಸ್ತಾಂತರ
Update: 2017-02-09 17:56 IST
ಮಂಗಳೂರು, ಫೆ.9 ಸಮಸ್ತ ಕಚೇರಿಗೆ ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಸಮಿತಿ ವತಿಯಿಂದ ಮೈಕ್ ಸೆಟ್ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಶರೀಅತ್ ಸಮನ್ವಯ ಸಮಿತಿಯ ಕಾರ್ಯದರ್ಶಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಖಜಾಂಚಿ ಸುಲೈಮಾನ್ ಹಾಜಿ ಕಲ್ಲಡ್ಕ, ಕೇಂದ್ರ ಸಮಿತಿಯ ಕಾರ್ಯದರ್ಶಿ ಹನೀಫ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸಾಕ್ ಫೈಝಿ, ಉಪಾಧ್ಯಕ್ಷ ಶರೀಫ್ ಮೂಸ, ಉಸ್ಮಾನ್ ಅಬ್ದುಲ್ಲ, ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ. ಮೊಯ್ದಿನಬ್ಬ ಹಾಜಿ, ಖಜಾಂಚಿ ಮೆಟ್ರೊ ಹಾಜಿ, ಜೊತೆ ಕಾರ್ಯದರ್ಶಿ ಹಕೀಂ ಪರ್ತಿಪಾಡಿ, ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಲ್. ಉಮರ್ ದಾರಿಮಿ, ಖಜಾಂಚಿ ರಿಯಾಝ್ ಬಂದರ್, ಎಸ್ಕೆಎಸ್ಸೆಸ್ಸೆಫ್ ವಲಯ ಅಧ್ಯಕ್ಷ ಇಬ್ರಾಹೀಂ ಕೊಣಾಜೆ ಮತ್ತಿತರು ಉಪಸ್ಥಿತರಿದ್ದರು.