ಕರಾಟೆಯಲ್ಲಿ ನಶೀತ್ ಪ್ರಥಮ

Update: 2017-02-09 12:28 GMT

ಮಂಗಳೂರು, ಫೆ.9: ಶೋಟಕನ್ ಕರಾಟೆ ಡು ಫೆಡರೇಶನ್ ಇತ್ತೀಚೆಗೆ ಗೋವಾದ ಮಪುಸದ ಪೆಡ್ಡಮ್ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಆಯೋಜಿಸಿದ್ದ ಉಸ್ಕು ಏಸಿಯನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ 4ನೆ ತರಗತಿ ವಿದ್ಯಾರ್ಥಿ ಎಂ.ಎಚ್. ನಶೀತ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಟೀಮ್ ಕಟ 10-11 ಬೆಗ್ ವಿಭಾಗದಲ್ಲಿ ಪ್ರಥಮ ಸ್ಥಾನ, ವೈಯುಕ್ತಿಕ ಕುಮಿಟೆ 10-11 ಬೆಗ್ ವಿಭಾಗದಲ್ಲಿ ಮೂರನೇ ಸ್ಥಾನ ಹಾಗೂ ವೈಯುಕ್ತಿಕ ಕಟ 10-11 ಬೆಗ್ ಭಾಗದಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ. ಬಿಜೈ ನಿವಾಸಿ ನಝೀರ್ ಮತ್ತು ನಸೀಮಾ ದಂಪತಿಯ ಪುತ್ರನಾಗಿರುವ ಇವರು ವಿಕ್ಟರ್ ಡಿಸೋಜರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News