ಕೈಕಂಬ: ಬೈಕ್‌ಗಳೆರಡರ ಮಧ್ಯೆ ಢಿಕ್ಕಿ - ಓರ್ವ ಮೃತ್ಯು
Update: 2017-02-09 18:40 IST
ಕಡಬ, ಫೆ.9. ಇಲ್ಲಿಗೆ ಸಮೀಪದ ಕೈಕಂಬ ಎಂಬಲ್ಲಿ ಬೈಕ್‌ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಸವಾರನೋರ್ವ ಮೃತಪಟ್ಟು ಈರ್ವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಮೃತರನ್ನು ಸುಳ್ಯ ತಾಲೂಕು ಸುಬ್ರಹ್ಮಣ್ಯ ಗ್ರಾಮದ ವಲಗದಕೇರಿ ನಿವಾಸಿ ದಿ ತನಿಯ ಎಂಬವರ ಪುತ್ರ ದಿನೇಶ್(24) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಪ್ರಭಾಕರ ಹಾಗೂ ಗುರುಪ್ರಸಾದ್ ಎಂಬವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.