ಉಡುಪಿ: ರೈಲಿನಲ್ಲಿ ಅಕ್ರಮ ಗೋವಾ ಮದ್ಯ ಪತ್ತೆ
Update: 2017-02-09 19:58 IST
ಉಡುಪಿ, ಫೆ.9: ಕೊಂಕಣ ರೈಲು ಮಾರ್ಗದ ಕಾರವಾರ ರೈಲು ನಿಲ್ದಾಣದಲ್ಲಿ ರೈಲುಗಳ ವಿಶೇಷ ತಪಾಸಣೆಯ ವೇಳೆ ಆರ್‌ಪಿಎಫ್ ಸಿಬ್ಬಂದಿಗಳಿಗೆ ಮಡಂಗಾವ್- ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತಿದ್ದ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಬುಧವಾರ ಕಾರವಾರ ರೈಲು ನಿಲ್ದಾಣದಲ್ಲಿ ನಡೆದ ತಸಾಸಣೆಯ ವೇಳೆ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಯಾವುದೇ ವಾರಸುದಾರರಿಲ್ಲದೇ ಸಾಗಿಸಲಾಗುತಿದ್ದ 750 ಎಂ.ಎಲ್‌ನ 12 ಬಾಟಲಿ, 500ಎಂಎಲ್‌ನ 16 ಬಾಟಲಿ ಸೇರಿದಂತೆ ವಿವಿಧ ಬ್ರಾಂಡ್‌ಗಳ ಒಟ್ಟು 17 ಲೀ.ಅಕ್ರಮ ಮದ್ಯ ಪತ್ತೆಯಾಗಿದೆ. ಇವುಗಳ ಅಂದಾಜು ವೌಲ್ಯ 3,300ರೂ.ಗಳೆಂದು ಹೇಳಲಾಗಿದೆ. ಪತ್ತೆಯಾದ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.