ಪರ್ಕಳ: ಬೆಂಕಿ ಹಿಡಿದ ಮರದ ರಕ್ಷಣೆ
Update: 2017-02-09 20:01 IST
ಪರ್ಕಳ, ಫೆ.9: ಇಲ್ಲಿನ ನಗರಸಭೆ ಸ್ವಾಗತ ಕಮಾನಿನ ಬಳಿಯ ದೂಪದ ಮರಕ್ಕೆ ಇಂದು ಅಕಸ್ಮಿಕವಾಗಿ ಬೆಂಕಿ ತಗಲಿದ್ದು, ಮಾಹಿತಿ ಪಡೆದ ಮೆಸ್ಕಾಂ ಸಿಬ್ಬಂದಿಗಳು ಊರಿನ ಸಾರ್ವಜನಿಕರ ನೆರವಿನಿಂದ ಬೆಂಕಿಯನ್ನು ಆರಿಸುವ ಮೂಲಕ ಮರವನ್ನು ರಕ್ಷಿಸುವ ಪ್ರಯತ್ನ ನಡೆಸಿದರು.
ಮೆಸ್ಕಾಂನ ಲೈನ್‌ಮ್ಯಾನ್ ಜಯದೇವ ಮತ್ತು ಸಿಬ್ಬಂದಿಗಳು ತಕ್ಷಣ ಕಾರ್ಯ ಪ್ರವರ್ತರಾಗಿ ನೀರು ತಂದು ಲಕ್ಷಾಂತರ ರೂ. ಬೆಲೆ ಬಾಳುವ ಮರಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರು.
ಇವರಿಗೆ ಪರ್ಕಳದ ಸಾಮಾಜಿಕ ಕಾರ್ಯಕರ್ತ ರಾದ ಗಣೇಶ್‌ರಾಜ್ ಸರಳೇಬೆಟ್ಟು, ಸುಧೀರ್ ಶೆಟ್ಟಿ, ಹೈಟೆಕ್ ಪರ್ಕಳ ಮುಂತಾದವರು ನೆರವು ನೀಡಿದರು.