ಮುಂಡಗೋಡ : ಶ್ರೀ ಆಜಂನೇಯ ಮತ್ತು ಶ್ರೀಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ
Update: 2017-02-09 20:36 IST
ಮುಂಡಗೋಡ: ನಗರ ಪೊಲೀಸ ಠಾಣೆ ಆವರಣದಲ್ಲಿ ಶ್ರೀ ಆಂಜನೇಯ ಮತ್ತು ಶ್ರೀಚೌಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಾಲಯದ ಕಳಸಾರೋಹಣ ಗುರುವಾರ ಅತಿ ವಿಜೃಂಬಣೆಯಿಂದ ಜರುಗಿತು.
2 ದಿಗಳ ಕಾಲ ಪೂಜಾಕೈಂಕರ್ಯ ,ವಿಧಿ ವಿಧಾನಗಳೊಂದಿಗೆ ಪವಮಾನ ಹನ, ಮಹಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಗುರುವಾರ ಬೆಳಗ್ಗೆ 10.22 ಗಂಟೆಗೆ ಶ್ರೀಆಜಂನೇಯ ಮೂರ್ತಿ ಹಾಗೂ ಶ್ರೀಚೌಡೇಶ್ವರಿ ಮೂತಿ ಪ್ರತಿಷ್ಠಾಪಿಸಲಾಯಿತು ಮಂಚಿಕೇರಿ ಕುಂಬಾರಕುಳಿಯ ಲಕ್ಷ್ಮಿನಾರಾಯಣ ಭಟ್ ಅವರಿಂದ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಪಿ.ಐ ಕಿರಣಕುಮಾರ ನಾಯ್ಕ, ಸರಕಾರಿ ವಕೀಲರು ಎಮ್.ಎಚ್ ನಾಯಕ, ಪಿ.ಎಸ್. ಆಯ್ ಲ್ಕಪ್ಪ ನಾಯ್ಕ, ಮಾಜಿ ಶಾಸಕ ವಿ.ಎಸ್ ಪಾಟೀಲ ಎಎಸ್‌ಆಯ್ ಗಣಪತಿ ಗೌಡಾ, ಆಶೋಕ ರಾಠೋಡ, ವಿಠ್ಠಲ ಮಾಲವಾಡಕರ, ಪೊಲೀಸ ಹಾಗೂ ಸ್ಟೇಟ್‌ಬ್ಯಾಂಕ್ ಆಫ್ ಮೈಸೂರ ಸಿಬ್ಬಂದಿ ವರ್ಗ ಸೇರಿದಂತೆ ಸಹಸ್ರ ಸಂಖ್ಯೆ ಭಕ್ತಾಧಿಗಳು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.