ಮಲ್ಯ ಗಡೀಪಾರು: ಬ್ರಿಟನ್‌ಗೆ ಭಾರತದ ಮನವಿ

Update: 2017-02-09 15:07 GMT

ಹೊಸದಿಲ್ಲಿ, ಫೆ.9: ಸಾಲ ಮರುಪಾವತಿ ಮಾಡದಿರುವುದು ಸೇರಿದಂತೆ ಹಲವು ಆರ್ಥಿಕ ಅಕ್ರಮ ನಡೆಸಿರುವ ಆರೋಪಕ್ಕೆ ಒಳಗಾಗಿ, ಬಳಿಕ ಪಲಾಯನ ಮಾಡಿರುವ ಉದ್ಯಮಿ ವಿಜಯ ಮಲ್ಯರನ್ನು ಗಡೀಪಾರು ಮಾಡಬೇಕೆಂದು ಬ್ರಿಟನ್‌ಗೆ ಭಾರತ ಮನವಿ ಸಲ್ಲಿಸಿದೆ.

ಸಿಬಿಐ ಸಲ್ಲಿಸಿರುವ ಗಡೀಪಾರು ಮನವಿಯನ್ನು ಭಾರತದಲ್ಲಿರುವ ಬ್ರಿಟನ್ ರಾಯಭಾರಿಗೆ ಸಲ್ಲಿಸಲಾಗಿದೆ. ಭಾರತದಲ್ಲಿ ವಿಚಾರಣೆಗೆ ಹಾಜರಾಗುವ ಉದ್ದೇಶದಿಂದ ಮಲ್ಯರನ್ನು ಗಡೀಪಾರು ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

 ಮಲ್ಯರ ವಿರುದ್ಧ ಭಾರತವು ನ್ಯಾಯಸಮ್ಮತ ಪ್ರಕರಣ ದಾಖಲಿಸಿದೆ. ನಮ್ಮ ಕೋರಿಕೆಯನ್ನು ಬ್ರಿಟನ್ ಮನ್ನಿಸಿದರೆ, ನಮ್ಮ ಕಳವಳವನ್ನು ಅವರು ಅರ್ಥೈಸಿಕೊಂಡು ಗೌರವಿಸಿದಂತಾಗುತ್ತದೆ ಎಂದು ಸ್ವರೂಪ್ ಹೇಳಿದರು. ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಈವರೆಗೆ ಗಡೀಪಾರು ಮನವಿ ಸಲ್ಲಿಸಲಾಗಿಲ್ಲ ಎಂದವರು ಈ ಸಂದರ್ಭ ತಿಳಿಸಿದರು. ಐಡಿಬಿಐ ಬ್ಯಾಂಕಿನ 720 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಸಿಬಿಐ ನ್ಯಾಯಾಲಯ ಮಲ್ಯರ ವಿರುದ್ಧ ಜಾಮೀನುರಹಿತ ವಾರಾಂಟ್ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News