×
Ad

ರಚನಾತ್ಮಕ ಸಂಬಂಧ :ಚೀನಾ ಅಧ್ಯಕ್ಷರಿಗೆ ಟ್ರಂಪ್ ಪತ್ರ

Update: 2017-02-09 20:42 IST

ನ್ಯೂಯಾರ್ಕ್, ಫೆ.9: ಉಭಯ ದೇಶಗಳ ಮಧ್ಯೆ ರಚನಾತ್ಮಕ ಸಂಬಂಧ ಇರಲು ಬಯಸುತ್ತೇನೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರ ಬರೆದಿದ್ದಾರೆ.

ಅಧ್ಯಕ್ಷರಾಗಿ ತನ್ನ ಪದಗ್ರಹಣವನ್ನು ಅಭಿನಂದಿಸಿ ಚೀನಾ ಅಧ್ಯಕ್ಷರು ನೀಡಿದ ಹೇಳಿಕೆ ಗೆ ಪತ್ರದಲ್ಲಿ ಧನ್ಯವಾದ ಸೂಚಿಸಿರುವ ಟ್ರಂಪ್, ಚೀನೀಯರಿಗೆ ರೂಸ್ಟರ್ ಹೊಸ ವರ್ಷಾಚರಣೆ ಅಂಗವಾಗಿ ಶುಭ ಹಾರೈಸಿದ್ದಾರೆ.

ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉಭಯ ನಾಯಕರೂ ಇದುವರೆಗೆ ಪರಸ್ಪರ ನೇರವಾಗಿ ಸಂಭಾಷಣೆ ನಡೆಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News