ಅಕ್ರಮ ಮರಳು ಸಾಗಾಟ: ಲಾರಿ ವಶ
Update: 2017-02-09 22:35 IST
ಮಂಗಳೂರು, ಫೆ. 9: ಅಕ್ರಮವಾಗಿ ಮರಳು ತುಂಬಿಸಿಕೊಂಡು ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ಉರ್ವಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಠಾಣಾ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಹಾಗೂ ಎಚ್‌ಸಿ ಲೋಕೇಶ್ ಅವರು ಕೊಟ್ಟಾರ ಚೌಕಿ ಬಳಿ ಲಾರಿಯನ್ನು ನಿಲ್ಲಿಸಿದಾಗ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಹಾಗೂ ಮರಳಿನ ಮೌಲ್ಯ ಒಟ್ಟು 15.1 ಲಕ್ಷ ರೂ. ರೂ. ಎಂದು ಅಂದಾಜಿಸಲಾಗಿದೆ.