ಮುಖ್ಯಮಂತ್ರಿಯನ್ನು ಭೇಟಿಯಾದ ಬ್ಯಾರಿ ಅಕಾಡಮಿ ನಿಯೋಗ
Update: 2017-02-10 17:17 IST
ಮಂಗಳೂರು, ಫೆ.10: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಕಚೇರಿಯಲ್ಲಿ ಗುರುವಾರ ಭೇಟಿಯಾದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ನೇತೃತ್ವದ ನಿಯೋಗವು ಮಂಗಳೂರಿನಲ್ಲಿ ಬ್ಯಾರಿ ಸಾಹಿತ್ಯ ಭವನ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಸಚಿವ ಯು.ಟಿ.ಖಾದರ್ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರ ಕೇಳಿಕೆಯನ್ನು ಮಂಡಿಸಿತು.
ನಿಯೋಗದಲ್ಲಿ ಸಚಿವ ಯು.ಟಿ.ಖಾದರ್‌ರ ಆಪ್ತ ಸಹಾಯಕ ಮುಹಮ್ಮದ್ ಲಿಬ್ಝ್, ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ, ಬಿ.ಎ.ಅಬೂಬಕರ್, ಎನ್.ಇ.ಮುಹಮ್ಮದ್, ಮುಹಮ್ಮದ್ ಸ್ವಾಲಿಹ್ ಮಳವೂರು ಮೊದಲಾದವರು ಉಪಸ್ಥಿತರಿದ್ದರು.