ಹಝ್ರತ್ ಶೈಖ್ ಮೌಲವಿ ಉರೂಸ್ ಸಮಾರೋಪ
ಬಂಟ್ವಾಳ,ಫೆ.10 : ಪಾಣೆಮಂಗಳೂರು ಸಮೀಪದ ಗುಡ್ಡೆ ಅಂಗಡಿ ನೂರುದ್ದೀನ್ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದ 37ನೆ ವಾರ್ಷಿಕ ಕಾರ್ಯಕ್ರಮವು ಫೆ. 1ರಿಂದ 5ರವರೆಗೆ ನಡೆಯಿತು.
ಫೆ. 4ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಶಮೀಮ್ ಅಲಿ ತಂಙಳ್ ಕುಂಬೋಳ್ ದುವಾಶಿರ್ವಚನಗೈದರು. ಬಂಟ್ವಾಳ ಕೇಂದ್ರ ಜುಮಾ ಮಸೀದಿ ಖತೀಬ್ ಸಿ.ಎಂ. ಅನ್ಸಾರ್ ಬುರ್‌ಹಾನಿ ಮುಖ್ಯ ಭಾಷಣಗೈದರು.
ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸಜಿಪಮೂಡ ಗ್ರಾ.ಪಂ. ಅಧ್ಯಕ್ಷ ಗಣಪತಿ ಭಟ್, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಸ್ಥಳೀಯ ಮಸೀದಿ ಖತೀಬ್ ಸಿ.ಎಚ್. ಮುಹಮ್ಮದ್ ಲತೀಫಿ, ಮಸೀದಿ ಅಧ್ಯಕ್ಷ ಫಕೀರ್ ಅಹ್ಮದ್, ಪದಾಧಿಕಾರಿಗಳಾದ ಬಿ.ಎ. ಮುಹಮ್ಮದ್ ನೀಮಾ, ಅಬ್ದುಲ್ ಹಮೀದ್, ಪಿ.ಎಂ. ಮುಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಎಸ್. ಮುಹಮ್ಮದ್, ಉಮರುಲ್ ಫಾರೂಕ್, ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ, ಮದ್ರಸ ಅಧ್ಯಾಪಕರಾದ ಹುಸೈನ್ ದಾರಿಮಿ, ಅಬೂಬಕ್ಕರ್ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.