ಫೆ.13ರಂದು ಉಡುಪಿ ಜಿಲ್ಲಾ ಬಂದ್
ಪಡುಬಿದ್ರಿ,ಫೆ.10: ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಲ್ಲಿ ನಿರ್ಮಿಸಿದ ಟೋಲ್ ಫ್ಲಾಝಾದಲ್ಲಿ ಗುರುವಾರ ಮಧ್ಯರಾತ್ರಿಯಿಂದ ಟೋಲ್‌ಸಂಗ್ರಹ ಆರಂಭಿಸಿರುವುದನ್ನು ವಿರೋಧಿಸಿ ಫೆಬ್ರವರಿ 13ರಂದು ಸೋಮವಾರ ಉಡುಪಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ.
ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಟೋಲ್ ವಿರೋಧಿಗಳು ಬಂದ್‌ಗೆ ಕರೆ ನೀಡಿದ್ದು, ಬಸ್, ಕಾರು, ರಿಕ್ಷಾ ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದೆ. ಸೋಮವಾರದಂದು ಇಡೀ ದಿನ ಬಂದ್ ನಡೆಯಲಿದ್ದು, ಎಲ್ಲರು ಬೆಂಬಲ ಸೂಚಿಸುವಂತೆ ಮನವಿ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡ ನವಯುಗ ಕಂಪೆನಿಯು ಹೆದ್ದಾರಿ ಕಾಮಗಾರಿಯನ್ನು ಅವೈಜ್ಙಾನಿಕ ಕಾಮಗಾರಿ ನಡೆಸಿದೆ. ಅಲ್ಲದೆ ಕೆಲವಡೆ ಅಪೂರ್ಣವಾಗಿದೆ. ಪಡುಬಿದ್ರಿ ಪೇಟೆಯಲ್ಲಿ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಇನ್ನು ಕೆಲವಡೆ ಕಾಮಗಾರಿ ಅಪೂರ್ಣಗೊಂಡಿದೆ. ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ವಸೂಲಿ ಮಾಡಬಾರದು ಎಂದು ಉಡುಪಿ ಜಿಲ್ಲಾ ಗ್ರಾಪಂ ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ.