ಫೆ.12ರಂದು ಟೈಲರ್ಸ್ ವೃತ್ತಿಬಾಂಧವರ ಸಮಾವೇಶ
ಉಡುಪಿ, ಫೆ.10: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿಯ ವತಿಯಿಂದ ಟೈಲರ್ಸ್ ವೃತ್ತಿ ಬಾಂಧವರ ಸಮಾ ವೇಶವನ್ನು ಫೆ.12ರಂದು ಬೆಳಗ್ಗೆ 10ಗಂಟೆಗೆ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಮಾವೇಶವನ್ನು ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ವಿನಯ ಕುಮಾರ್ ಸೊರಕೆ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಲಿರುವರು. ಇದಕ್ಕೂ ಮುನ್ನ ಬೆಳಗ್ಗೆ 9ಗಂಟೆಗೆ ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಡಲಿದೆ ಎಂದು ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಹೊಲಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು. ಪಿಂಚಣಿ ಹಾಗೂ ಎಸ್‌ಪಿಎಸ್ ಲೈಟ್ ಯೋಜನೆಯನ್ನು ಎಲ್ಲ ವೃತ್ತಿ ಬಾಂಧ ವರಿಗೂ ಜಾರಿಗೊಳಿಸಬೇಕು. ಸರಕಾರ ಅಂಗೀಕರಿಸಿದ ಸ್ಮಾಟ್‌ಕಾರ್ಡ್ ಗುರು ತಿನ ಚೀಟಿಯನ್ನು ನೀಡಬೇಕು. ಮಹಿಳಾ ಟೈಲರ್ಸ್ ಹಾಗೂ ಎಲ್ಲ ಟೈಲರ್ ಗಳ ಹೆಣ್ಣು ಮಕ್ಕಳಿಗೆ ವಿವಾಹಧನ ಮತ್ತು ಹೆರಿಗೆ ಭತ್ಯೆ ನೀಡಬೇಕು. ಹೊಲಿಗೆ ಟೈಲರ್ಸ್‌ಗಳಿಗೆ ವಿಮಾ ಯೋಜನೆ ಮತ್ತು ಆರೋಗ್ಯ ಕಾರ್ಡ್, ನಿವೃತ್ತಿ ಮಾಸಾಶನ ವೇತನ ನೀಡಬೇಕು. ಮಕ್ಕಳಿಗೆ ವಿದ್ಯಾರ್ಥಿ ವೇತನ ಒದಗಿಸ ಬೇಕು. ಟೈಲರ್ಸ್ ಸಮುದಾಯ ಭವನ ನಿರ್ಮಿಸಲು ಸ್ಥಳ ಹಾಗೂ ಅನುದಾನ ಮಂಜೂರು ಮಾಡಬೇಕು ಎಂಬ ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಅಧ್ಯಕ್ಷ ಗುರುರಾಜ್ ಶೆಟ್ಟಿ, ಕೋಶಾಧಿಕಾರಿ ಗಣೇಶ್ ಶೆಟ್ಟಿಗಾರ್, ರಾಜ್ಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಜಿಲ್ಲಾ ಕೋಶಾ ಧಿಕಾರಿ ಕೆ.ರಾಮಚಂದ್ರ ಉಪಸ್ಥಿತರಿದ್ದರು.