×
Ad

ಫೆ.12-13ರಂದು ಮರುಅಧ್ಯಯನ, ದಾಖಲೀಕರಣ ಕಾರ್ಯಕ್ರಮ

Update: 2017-02-10 18:57 IST

ಉಡುಪಿ, ಫೆ.10: ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಮತ್ತು ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನ ಜಂಟಿ ಆಶ್ರಯದಲ್ಲಿ ಇತಿಹಾಸ, ಜಾನ ಪದ, ಸಾಹಿತ್ಯ, ದಾಖಲೀಕರಣ ಮತ್ತು ಪ್ರಾಚ್ಯಾಸಕ್ತಿ ವಿಷಯ ಗೊಂಚಿಲು ಅಧ್ಯಯನಗಳ ಕಾರ್ಯಕ್ರಮವನ್ನು ಫೆ.12 ಮತ್ತು 13ರಂದು ಹಮ್ಮಿಕೊಳ್ಳಲಾಗಿದೆ.

ಶಾರದಾ ಸ್ಕೂಲ್‌ನ ಗೀತಾಂಜಲಿ ಸಭಾಂಗಣದಲ್ಲಿ ಫೆ.12ರಂದು ಅಪರಾಹ್ನ 2ಗಂಟೆಗೆ ನಡೆಯುವ ‘ಬಹುಮುಖಿ- ಜ್ಞಾನಮುಖಿ ಭಾರತ’ ಅರ್ನಾಲ್ಡ್ ಬಾಕೆ 1938 ಮರುಅಧ್ಯಯನ ದೃಶ್ಯ ಮುದ್ರಿಕೆಗಳ ಅವಲೋಕನ ಕಾರ್ಯಕ್ರಮ ದಲ್ಲಿ ಅಮೆರಿಕದ ಪ್ರೊಫೆಸರ್ ಡಾ.ಅಮಿ ಕ್ಯಾಟಲಿನ್ ಜೈರಾಜ್ ಬಾಯ್ ಶಿಖರೋಪನ್ಯಾಸ ಮಾಡಲಿರುವರು ಎಂದು ಕೇಂದ್ರದ ಸಂಸ್ಥಾಪಕ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದಕ್ಕೆ ಅರ್ನಾಲ್ಡ್ ಬಾಕೆ ಕೊಡುಗೆಗಳ ಕುರಿತ ಕೃತಿ ಬಿಡುಗಡೆ, ಡಾ.ಅಮಿ ಕ್ಯಾಟಲಿನ್ ಅವರಿಗೆ ಪ್ರಾಚ್ಯಶ್ರೀ ಪ್ರಶಸ್ತಿ ಮತ್ತು ಭಾಗವತ ಶಿವಬುದ್ದಿ ಹಲ್ಲರೆ ಅವರಿಗೆ ಪ್ರಾಚ್ಯ ಪ್ರತಿಕಂಠಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಫೆ.13ರಂದು ಸಂಜೆ 5ಗಂಟೆಗೆ ಉಡುಪಿ ಜಗನ್ನಾಥ ಸಭಾಭವನದಲ್ಲಿ ತುಳು ಕೂಟದ ಸಹಯೋಗ ಮತ್ತು ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಸಹಭಾಗಿತ್ವದೊಂದಿಗೆ ಅರ್ನಾಲ್ಡ್ ಬಾಕೆ 1938 ಮರು ಅಧ್ಯ ಯನ: ಜಾನಪದೀಯ ಕಂಗೀಲು ನೃತ್ಯದ ದಾಖಲೀಕರಣ ಕಾರ್ಯಕ್ರಮ ಜರಗಲಿದೆ. ಕಟಪಾಡಿ ಮಟ್ಟು ಶ್ರೀಗುರುಬ್ರಹ್ಮ ಮುಗ್ಗೇರಕಳ ದೇವಸ್ಥಾನದ ಜಗನ್ನಾಥ ಬಂಗೇರ ಕಂಗೀಲು ನೃತ್ಯ ಪ್ರದರ್ಶಿಸಲಿರುವರು. ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕರಾದ ಪ್ರೊ.ವಿ.ಕೆ.ಯಾದವ್, ಪ್ರೊ.ನಾಗ ರಾಜ್ ಜಿ.ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News