ಕಟ್ಟಿಂಗೇರಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Update: 2017-02-10 19:02 IST
ಉಡುಪಿ, ಫೆ.10: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂ ರಾದ 50 ಲಕ್ಷ ರೂ. ಅನುದಾನದಲ್ಲಿ ಹೆರ್ಗ ಕಟ್ಟಿಂಗೇರಿ ಕೆರೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯರಾದ ದಿನಕರ ಶೆಟ್ಟಿ, ಸುಕೇಶ್ ಕುಂದರ್, ಪರ್ಕಳ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಶ್ರೀನಿವಾಸ ಉಪಾಧ್ಯಾಯ, ಪರ್ಕಳ ನಾರಾಯಣಗುರು ಸಂಘದ ಗೌರವಾಧ್ಯಕ್ಷ ಶೇಖರ ಪೂಜಾರಿ, ಸುಧಾಕರ ಹೆಗ್ಡೆ, ದಯಾನಂದ ಪೂಜಾರಿ, ಹೆರ್ಗ ಸಂಜೀವ ಪೂಜಾರಿ, ಅನಂತ ನಾಯ್ಕ, ಸೂರಪ್ಪಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.