×
Ad

ಕಾವ್ಯಶ್ರೀಗೆ ಜ್ಞಾನಶ್ರೀ ಪ್ರಶಸ್ತಿ

Update: 2017-02-10 19:22 IST

ಮಂಗಳೂರು, ಫೆ. 10: ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಇವರು ಕನ್ನಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೊಡಮಾಡುವ ಜ್ಞಾನಶ್ರೀ ರಾಜ್ಯ ಪ್ರಶಸ್ತಿಯು ಕಾವ್ಯ ಸೀತರಾಮ ಶೆಟ್ಟಿಯರಿಗೆ ಲಭಿಸಿದೆ.

ಮಂಗಳೂರು ಪುರಭವನದಲ್ಲಿ ನಡೆದಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಿದರು. ನೃತ್ಯ ಭಾರತಿ ಇದರ ಗೀತಾ ಸರಳಾಯ, ಪತ್ರಕರ್ತರಾದ ಪಿ.ಬಿಹರೀಶ್ ರೈ, ಎಂ. ಸದಾಶಿವ ಹೆಗ್ಡೆ ಮುಂತಾದವರು ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಮೂಲತಃ ಬಾಳ ನಿವಾಸಿಯಾಗಿರುವ ಕಾವ್ಯ ಬಹುಮುಖ ಪ್ರತಿಭೆ.ನಾಟಕ, ನೃತ್ಯ, ಯಕ್ಷಗಾನ ಹೀಗೆ ವಿವಿಧ ಕಲಾ ಪ್ರಕಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಬಾಲ ಪ್ರತಿಭೆಯ ನೆಲೆಯಲ್ಲಿ ಸಾಕಷ್ಟು ಬಹುಮಾನ ಪಡೆದುಕೊಂಡಿದ್ದಾಳೆ.ಶಿಕ್ಷಣ ಮತ್ತು ಕಲಾ ರಂಗದ ಇವರ ಸಾಧನೆ ಗುರುತಿಸಿ ಜ್ಞಾನ ಮಂದಾರ ಟ್ರಸ್ಟ್ ಈ ಪ್ರಶಸ್ತಿ ನೀಡಿ ಗೌರಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News